ಶ್ರೀಮಂಗಲ, ನ. 15: ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಚಿ ಗ್ರಾಮದಲ್ಲಿ ವನ್ಯಪ್ರಾಣಿಯ ದಾಳಿಗೆ ಎರಡು ಆಡುಗಳು ಬಲಿಯಾಗಿವೆ.

ಕುರ್ಚಿ ಗ್ರಾಮದ ರೈತ ಮಹಿಳೆ ಚೋಕಿರ ನೀಲಕ್ಕಿ ಅವರಿಗೆ ಸೇರಿದ ಆಡುಗಳನ್ನು ಮನೆಯ ಸಮೀಪದ ಬಾಣೆಯಲ್ಲಿ ಮೇಯಲು ಕಟ್ಟಲಾಗಿತ್ತು. ಸಂಜೆ ವೇಳೆ ಆಡುಗಳನ್ನು ಮನೆಗೆ ಕರೆತರಲು ತೆರಳಿದ ಸಂದರ್ಭ ವನ್ಯಪ್ರಾಣಿ ಎರಡು ಆಡುಗಳನ್ನು ಕೊಂದು, ಸಮೀಪದ ತೋಟದಲ್ಲಿ ಭಾಗಶಃ ತಿಂದಿರುವುದು ಪತ್ತೆಯಾಗಿದೆ.