ವೀರಾಜಪೇಟೆ, ನ. 15: ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಎಂದು ಹಿಂದೆ ನಿಲ್ಲುವುದಿಲ್ಲ. ಪ್ರತಿ ಗ್ರಾಮ ಹಳ್ಳಿಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಮೂಲಕ ಗ್ರಾಮ ವಿಕಾಸಕ್ಕೆ ಒತ್ತು ನೀಡಿದೆ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಲ-ಬೈರಂಬಾಡ ಲಿಂಕ್ ರಸ್ತೆಯ ಅಬಿವೃದ್ಧಿ ಕಾಮಗಾರಿಯ ರೂ. 10 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಉದ್ಘಾಟಿಸಿ ಮಾತನಾಡಿ ಕಳೆದೆರಡು ವರ್ಷಗಳಿಂದ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಆದಕಾರಣ ಅಭಿವೃದ್ಧಿ ಕಾರ್ಯದಲ್ಲಿ ಕೊಂಚಮಟ್ಟಿಗೆ ಕುಂಠಿತಗೊಂಡಿತು. ಈ ಬಾರಿ ಕೊರೊನಾದಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ. ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ಮುಂದುವರೆಯಲಿದೆ ಎಂದು ಹೇಳಿದರು.

ಕದನೂರು ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೋಂಡ ಶಶಿ ಸುಬ್ರಮಣಿ ಮಾತನಾಡಿ ಕದನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದ್ದು, ಅಂಬಲ-ಬೈರಂಬಾಡ ಲಿಂಕ್ ಕಾಂಕ್ರೀಟ್ ರಸ್ತೆ ಕೂಡ ಒಂದಾಗಿದೆ ಎಂದು ಹೇಳಿದರು.

ಇದೇ ಸಂದÀರ್ಭ ಆರ್.ಎಂ.ಸಿ. ಸದಸ್ಯ ಕುಂಬೇಯಂಡ ಗಣೇಶ್, ದೇವಣಗೇರಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಪುಗ್ಗೆರ ನಂದಾ ಗಣಪತಿ, ಪಿಡಬ್ಲ್ಯೂಡಿ ಸಹಾಯಕ ಅಭಿಯಂತರ ಯತೀಶ್, ಗ್ರಾಮಸ್ಥರಾದ ಪುಗ್ಗೆರ ನಂದಾ ಬೀನಂಡ ಪೂಣಚ್ಚ, ಐಚಂಡ ಸಾಬು, ಅಪ್ಪುಣಿ, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.