ಪೆÇನ್ನಂಪೇಟೆ: ಹುದಿಕೇರಿ ಹಾಗೂ ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನವನ್ನು ಉಪ ತಹಶೀಲ್ದಾರ್ ಎಂ.ಸಿ. ವೆಂಕಟೇಶ್, ಪಿ.ಡಿ.ಒ. ಪರಮೇಶ್, ಕಂದಾಯ ಪರಿವೀಕ್ಷಕ ಸಿ.ಎಂ. ನಿಶಾನ್, ಗ್ರಾಮ ಲೆಕ್ಕಾಧಿಕಾರಿಗಳಾದ ಜಿ.ಕೆ. ನಿತನ್, ಶರೀಫ್, ಸಂತೋಷ್ ಮತ್ತು ಆಶಾ ಅವರ ಸಮ್ಮುಖದಲ್ಲಿ ಹುದಿಕೇರಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಸಲಾಯಿತು.ಕೆ. ಬಾಡಗ: ಶ್ರೀಮಂಗಲ ಹೋಬಳಿ ಕೆ. ಬಾಡಗ ಗ್ರಾಮಕ್ಕೆ ಸಂಬಂಧಿಸಿದಂತೆ ತಾ. 12 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೂರಿಕಾಡು, ಕೆ. ಬಾಡಗದಲ್ಲಿ ಉಪತಹಶೀಲ್ದಾರ್, ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸೇರಿ ಪೌತಿ ಖಾತೆ ಆಂದೋಲನ ನಡೆಸಿದರು. ಒಟ್ಟು 16 ಅರ್ಜಿಗಳನ್ನು ಸ್ವೀಕರಿಸಲಾಯಿತು.ನಾಪೋಕ್ಲು: ಕಂದಾಯ ಇಲಾಖೆ ವತಿಯಿಂದ ಪೌತಿ ಖಾತೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಉಪತಹಶೀಲ್ದಾರ್ ಸಿದ್ದರಾಜು ಹೇಳಿದರು. ಸರ್ಕಾರದ ಸವಲತ್ತುಗಳನ್ನು ಪಡೆಯಲು ಫಲಾನುಭವಿಯ ಹೆಸರಿನಲ್ಲಿ ಖಾತೆ ಇರುವುದು ಅತೀ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಆರ್‍ಟಿಸಿಯಲ್ಲಿ ದಾಖಲಿಸಿರುವ ಕೃಷಿಕರು ಮೃತಪಟ್ಟಿದ್ದಲ್ಲಿ ಅವರ ಕಾನೂನುಬದ್ದ ವಾರಸುದಾರರು ಪೌತಿ ಖಾತೆಯನ್ನು ಮಾಡಿಸಿಕೊಳ್ಳಬೇಕಾಗಿದೆ.

ನಾಪೋಕ್ಲು ಹೋಬಳಿಯ ಪಾರಾಣೆ ಮತ್ತು ಕಕ್ಕಬ್ಬೆ ವೃತ್ತದಲ್ಲಿ ಪೌತಿ ಖಾತೆ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಂದಾಯ ಪರಿವೀಕ್ಷಕ ಶಿವಕುಮಾರ್, ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಹಾತೂರು ವ್ಯಾಪ್ತಿಯಲ್ಲಿ: ಪೊನ್ನಂಪೇಟೆ ಹೋಬಳಿಯ ಹಾತೂರು ವ್ಯಾಪ್ತಿಯ ಕುಂದ ಈಚೂರು ಗ್ರಾಮ, ಅರುವತೋಕ್ಲು ಪಂಚಾಯಿತಿಯ ಅರುವತೋಕ್ಲು ಮತ್ತು ಕಿರುಗೂರು, ದೇವರಪುರದಲ್ಲಿ ಪೌತಿ ಖಾತೆ ಆಂದೋಲನ ನಡೆಯಿತು.

ಗ್ರಾಮಸ್ಥರು ಪೌತಿ ಖಾತೆ ಆಂದೋಲನಕ್ಕೆ ನಿಗದಿತ ಸಮಯದಲ್ಲಿ ಆಗಮಿಸಿ ಬೇಕಾದ ಅರ್ಜಿಗಳನ್ನು ಪಡೆದು ಪೊನ್ನಂಪೇಟೆ ಕಂದಾಯ ಪರಿವೀಕ್ಷಕರಿಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದರು. ಈ ಭಾಗದ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೌತಿ ಖಾತೆ ಆಂದೋಲನದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರರು, ಕಂದಾಯ ಪರಿವೀಕ್ಷಕರು, ಹೋಬಳಿ ಮಟ್ಟದ ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು ಹಾಜರಿದ್ದರು.ಅಮ್ಮತ್ತಿ ಹೋಬಳಿ: ಅಮ್ಮತ್ತಿ ಹೋಬಳಿ ಕಂದಾಯ ಇಲಾಖೆಯ ವತಿಯಿಂದ ಪೌತಿ ಖಾತೆಯ ಕಾರ್ಯಕ್ರಮಕ್ಕೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಎಂ.ಎಲ್. ಹರೀಶ್ ಚಾಲನೆ ನೀಡಿದರು.

ಅಮ್ಮತ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಮ್ಮತ್ತಿ ಹೋಬಳಿ ನಾಡ ಕಚೇರಿಯ ವ್ಯಾಪ್ತಿಗೆ ಒಳಪಡುವ ಗ್ರಾಮಸ್ಥರ ಪೌತಿ ಖಾತೆಯನ್ನು ಮಾಡುವ ಉದ್ದೇಶದಿಂದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಹಾಗೂ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಅರ್ಜಿ ನೀಡುವ ಬಗ್ಗೆ ಮಾಹಿತಿ ಆಂದೋಲನವನ್ನು ಪ್ರಾರಂಭಿಸಲಾಗಿದೆ ಎಂದರು.ಸಂಪಾಜೆ: ಕಂದಾಯ ಇಲಾಖೆ, ಜಿಲ್ಲಾಡಳಿತ ಕೊಡಗು, ಮಡಿಕೇರಿ ತಾಲೂಕು ವತಿಯಿಂದ ಪೌತಿ-ವಾರಸಾ ಖಾತೆ ಆಂದೋಲನ ಕಾರ್ಯಕ್ರಮಕ್ಕೆ ಸಂಪಾಜೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಚಾಲನೆ ನೀಡಲಾಯಿತು. ಸಮಾರಂಭದಲ್ಲಿ ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ, ಸಂಪಾಜೆ-ಪೆರಾಜೆ ಗ್ರಾಮ ಲೆಕ್ಕಾಧಿಕಾರಿ ರಮೇಶ್, ಚೆಂಬು ಗ್ರಾಮ ಲೆಕ್ಕಾಧಿಕಾರಿ ರೇಷ್ಮಾ, ಬಿಳಿಗೇರಿ, ಹಾಕತ್ತೂರು ಗ್ರಾಮ ಲೆಕ್ಕಾಧಿಕಾರಿ ರೇವತಿ, ಹೆರವನಾಡು ಗ್ರಾಮ ಲೆಕ್ಕಾಧಿಕಾರಿ ಮಹಾನಂದ ಮಾಂಗ್, ಮದೆನಾಡು ಗ್ರಾಮ ಲೆಕ್ಕಾಧಿಕಾರಿ ರಶೀದಾ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಆಂದೋಲನದಲ್ಲಿ ಸಂಪಾಜೆ ಹೋಬಳಿಗೆ ಸಂಬಂಧಪಟ್ಟ ಗ್ರಾಮದ ಗ್ರಾಮಸ್ಥರ ಪೌತಿ ಖಾತೆ ಬದಲಾವಣೆಯ ಅರ್ಜಿಯನ್ನು ಸ್ವೀಕರಿಸಲಾಯಿತು.