ಶನಿವಾರಸಂತೆ, ನ. 14: ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಪಂಪ್‍ಸೆಟ್ ಹೊಂದಿರುವ ರೈತರುಗಳು ಹಾಗೂ ಕಾಫಿ ಬೆಳೆಗಾರರ ಸಂಘದ ವತಿಯಿಂದ ಇಂದು ಶನಿವಾರಸಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಶಾಖಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಪಂಪ್‍ಸೆಟ್ ಹೊಂದಿರುವ ರೈತರು, ಕಾಫಿ ಬೆಳೆಗಾರರು 10 ಹೆಚ್‍ಪಿ ವರೆಗಿನ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಒದಗಿಸಲು ಆಗ್ರಹಿಸಿ, ಬೆಳೆಗಾರರು ಸ್ವ-ಸಹಾಯ ಸಂಘ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪ್ರತಿಭಟನೆ ನಡೆಯಿತು. ಜೂನಿಯರ್ ಇಂಜಿನಿಯರ್ ಬಿ.ಪಿ. ಹೇಮಂತ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷ್ಮಣ, ಸಂಘದ ಸದಸ್ಯರುಗಳಾದ ಡಿ.ಬಿ. ಧರ್ಮಪ್ಪ, ಕೆ.ಎ. ಮಂಜುನಾಥ್, ಸಂದೀಪ್, ಶರತ್ ಶೇಖರ್, ಎನ್.ಕೆ. ಅಪ್ಪಸ್ವಾಮಿ, ಬಿ.ಟಿ. ರಂಗಸ್ವಾಮಿ, ನಿರಂಜನ್, ಗಿರಿ, ಹೆಚ್.ಕೆ. ದಯ, ಪ್ರದೀಪ್, ಹೆಚ್.ಎಸ್. ಸುಬ್ಬಪ್ಪ, ಬಸವರಾಜ್, ಜಯಪ್ಪ, ಪುಟ್ಟಸ್ವಾಮಿ, ಮಧು ಇತರರು ಭಾಗವಹಿಸಿದ್ದರು.