ಬಿ.ಜೆ.ಪಿ. ಬೂತ್ ಸಭೆಕುಶಾಲನಗರ, ನ. 14: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮಟ್ಟದ ಬಿಜೆಪಿ ಬೂತ್ ಅಧ್ಯಕ್ಷರುಗಳ ಸಭೆ ನಡೆಯಿತು. ಮುಳ್ಳುಸೋಗೆ ಶಕ್ತಿ ಕೇಂದ್ರದ ಅಧ್ಯಕ್ಷ ಎಸ್.ವಿ. ಗಣಪತಿ ಅಧ್ಯಕ್ಷತೆಯಲ್ಲಿ ಗ್ರಾಮದ ವಿನಾಯಕ ಬಡಾವಣೆಯ ಅಂಗನವಾಡಿ ಕೇಂದ್ರದ ಆವರಣದಲ್ಲಿ ನಡೆದ ಸಭೆಯಲ್ಲಿ ಮುಂಬರುವ ಗ್ರಾ.ಪಂ. ಚುನಾವಣೆ ನಿಟ್ಟಿನಲ್ಲಿ ಪಕ್ಷ ಸಂಘಟನೆ, ವಿವಿಧ ಜವಾಬ್ದಾರಿಗಳ ನಿರ್ವಹಣೆ ಬಗ್ಗೆ ಚರ್ಚೆ ನಡೆಯಿತು.

ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಿಲ್ಲನ ಗಣಿಪ್ರಸಾದ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಎಸ್. ಶಿವಾನಂದ, ಮಹಿಳಾ ಮೋರ್ಚಾ ಅಧ್ಯಕ್ಷೆ ಅಕ್ಕಮ್ಮ ಸೋಮಣ್ಣ, ಕಾರ್ಯದರ್ಶಿ ನವ್ಯ, ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಮಣಿ, ಪ್ರಮುಖರಾದ ರಾಮಶೆಟ್ಟಿ, ಶಿವಪ್ಪ, ಎಂ.ಎಸ್. ಕುಮಾರ, ಆಸಿಫ್ ಸೇರಿದಂತೆ ವಿವಿಧ ಬೂತ್‍ಗಳ ಅಧ್ಯಕ್ಷರುಗಳು ಇದ್ದರು.