ಮಡಿಕೇರಿ, ನ. 14: ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಸಮ್ಮುಖದಲ್ಲಿ ರಚಿಸಿದ ಕೊಡಗು ಜಿಲ್ಲಾ ಕಾಂಗ್ರೆಸ್‍ನ ಬಿಎಲ್ ಎ 2 ಪಟ್ಟಿಯನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ನೇತೃತ್ವದಲ್ಲಿ ಡಿಸಿಸಿ ಸದಸ್ಯ ಪ್ರಕಾಶ್ ಆಚಾರ್ಯ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಜಿ.ಸಿ. ಜಗದೀಶ್, ಶಾಸಕರ ಆಪ್ತ ಸಹಾಯಕ ಬೊಳ್ಳಜ್ಜಿರ ಅಯ್ಯಪ್ಪ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು

ಚುನಾವಣೆ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಹೆಚ್ಚಿಸುವ ಸಲುವಾಗಿ ರಾಜ್ಯ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಂದ ಅಧಿಕೃತ ಬಿಎಲ್ ಎ (ಬೂತ್ ಲೆವಲ್ ಏಜೆಂಟ್) 1 ಮತ್ತು 2 ರ ಪಟ್ಟಿಯನ್ನು ಕೋರಿದ್ದು ಕೊಡಗು ಜಿಲ್ಲೆಗೆ ಬಿಎಲ್ ಎ 1 ಆಗಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ನೀಡಿದ್ದರು .ಅದರಂತೆ ವೀಣಾ ಅಚ್ಚಯ್ಯ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ 274 ಮತ್ತು ಮಡಿಕೇರಿ ಕ್ಷೇತ್ರದ 269 ಮತಗಟ್ಟೆಗಳಿಗೆ ಬಿಎಲ್ ಎ 2 ನೇಮಿಸಿ ಚುನಾವಣಾ ಆಯೋಗಕ್ಕೆ ನೀಡಿದ್ದಾರೆ.

ಪಕ್ಷದ ಎಲ್ಲಾ ಪ್ರಮುಖ ನಾಯಕರುಗಳು ಕೂಡ ತಮ್ಮ ತಮ್ಮ ಮತಗಟ್ಟೆಗಳಲ್ಲಿ ಜವಾಬ್ದಾರಿ ಹೊರಲು ಡಿ.ಕೆ. ಶಿವಕುಮಾರ್ ಆದೇಶ ನೀಡಿದ್ದು, ಅದರಂತೆ ವೀಣಾ ಅಚ್ಚಯ್ಯ ಅವರು ತಮ್ಮ ಮತಗಟ್ಟೆಯಾದ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಬೂತ್ ಸಂಖ್ಯೆ 203 ರಲ್ಲಿ ಸ್ವತಹ ಬಿಎಲ್ ಎ 2 ಆಗಿದ್ದಾರೆ.