ಮಡಿಕೇರಿ, ನ. 14: ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ಜ್ಯೋತಿ ಕ್ಯಾಲಿಗ್ರಫಿ ಕೇಂದ್ರದಿಂದ 3ನೇ ವರ್ಷದ ಕ್ಯಾಲಿಗ್ರಫಿ ಮತ್ತು ಕೈಬರಹ ಪ್ರದರ್ಶನಕ್ಕೆ ಚಾಲನೆ ದೊರಕಿದೆ.
ಕೇಂದ್ರದ ವಿದ್ಯಾರ್ಥಿಗಳಾದ ಚೈತನ್ಯ, ಶ್ರೀಲತಾ, ಶ್ರೀದೇವಿ, ಆತ್ರೇಯ, ಕೇಂದ್ರದ ಶಿಕ್ಷಕಿ ವೀಣಾ ಉಮೇಶ್, ಬಾಲಕರ ಬಾಲಮಂದಿರದ ಉಸ್ತುವಾರಿ ಚರಣ್ ದೀಪ ಬೆಳಗಿಸಿ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಕಲಾಪ್ರದರ್ಶನವು ತಾ. 15 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರುತ್ತದೆ. ವಿದ್ಯಾರ್ಥಿಗಳ ಸುಂದರ ಕೈಬರಹ, ಕ್ಯಾಲಿಗ್ರಫಿಯೊಂದಿಗೆ, ಕ್ಯಾಲಿಗ್ರಫಿಗೆ ಬಳಸುವ ವೈವಿಧ್ಯಮಯ ಪೆನ್‍ಗಳು, ಬ್ರಶ್‍ಗಳು, ಶಾಯಿಯ ಪ್ರದರ್ಶನವೂ ಗಮನ ಸೆಳೆಯುತ್ತಿದೆ. ವೀಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರುವಂತೆ ಜ್ಯೋತಿ ಕ್ಯಾಲಿಗ್ರಫಿ ಕೇಂದ್ರದ ಮುಖ್ಯಸ್ಥೆ ನಮಿತಾ ರಾವ್ ಕೋರಿದ್ದಾರೆ.