ಕೂಡಿಗೆ, ನ. 14: ಚಿಕ್ಕ ಬೆಟ್ಟಗೇರಿ ಗ್ರಾಮದ ಕಾಫಿ ತೋಟವೊಂದರಲ್ಲಿ ಗುಂಡಿಯೊಳಗೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು 3 ಲಕ್ಷದ 60 ಸಾವಿರ ರೂ. ಮೌಲ್ಯದ ಬೀಟೆ, ಹೊನ್ನೆ ಹಾಗೂ ಮತ್ತಿ ಮರಗಳನ್ನು ಸಿಐಡಿ ಅರಣ್ಯ ಘಟಕ ವಶಪಡಿಸಿಕೊಂಡಿದ್ದು, ತೋಟದ ಮಾಲೀಕ ಬೆಂಗಳೂರಿನ ಯೋಗೇಂದ್ರ ವಿಕ್ರಮ್ ವಿರುದ್ಧ ಪ್ರಕರಣ ದಾಖಲಿಸಿದೆ.