ಸೋಮವಾರಪೇಟೆ,ನ.13: ಕಳೆದ ತಾ. 2ರಂದು ಸೋಮವಾರಪೇಟೆಯ ತಾಲೂಕು ಕಚೇರಿಯಲ್ಲಿ ಪೌತಿ ಖಾತೆ ಆಂದೋಲನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಮಾತನಾಡುತ್ತಾ, ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಮತ್ತು ಸಹಾಯಕರ ಕಾರ್ಯವೈಖರಿಯ ಬಗ್ಗೆ ಎಚ್ಚರಿಕೆಯ ಮಾತುಗಳನ್ನು ಆಡಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಗೌಡಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿಯೋರ್ವರು ಭ್ರಷ್ಟಾಚಾರ ನಿಗ್ರಹ ದಳದ ಸೋಮವಾರಪೇಟೆ,ನ.13: ಕಳೆದ ತಾ. 2ರಂದು ಸೋಮವಾರಪೇಟೆಯ ತಾಲೂಕು ಕಚೇರಿಯಲ್ಲಿ ಪೌತಿ ಖಾತೆ ಆಂದೋಲನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಮಾತನಾಡುತ್ತಾ, ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಮತ್ತು ಸಹಾಯಕರ ಕಾರ್ಯವೈಖರಿಯ ಬಗ್ಗೆ ಎಚ್ಚರಿಕೆಯ ಮಾತುಗಳನ್ನು ಆಡಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಗೌಡಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿಯೋರ್ವರು ಭ್ರಷ್ಟಾಚಾರ ನಿಗ್ರಹ ದಳದ (ಮೊದಲ ಪುಟದಿಂದ) ನಾಡಕಚೇರಿಯಲ್ಲಿ ಗೌಡಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿದ್ದಾರೆ. ಇಂದಿಗೂ ‘ಪರ್ಮನೆಂಟ್’ ಆಗದಿರುವ ಜಟ್ಟಪ್ಪ ಅವರು ಸರ್ಕಾರ ನೀಡುವ ಸಂಬಳದೊಂದಿಗೆ ಸಾರ್ವಜನಿಕರಿಂದಲೂ ಲಂಚದ ರೂಪದ ‘ಎಕ್ಸ್‍ಟ್ರಾ ಸಂಬಳ’ ಪಡೆಯುತ್ತಿದ್ದ ಸಂದರ್ಭ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.ಗೌಡಳ್ಳಿ ನಡ್ಲಕೊಪ್ಪ ಗ್ರಾಮದ ಮುತ್ತಪ್ಪ ಅವರು ತಮ್ಮ ಮೂರು ಗಂಡುಮಕ್ಕಳಿಗೆ ಆಸ್ತಿಯನ್ನು ವಿಭಾಗ ಮಾಡಬೇಕಿದ್ದು, ಸ.ನಂ. 173, 117, 153ರ ಭೂಮಿಗೆ ಕಂದಾಯ ನಿಗದಿ ಮಾಡಲು ಮತ್ತು ಪತ್ನಿ ಸುಬ್ಬಮ್ಮ ಅವರಿಗೆ ಸರ್ಕಾರ ನೀಡುವ ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿ ಪಡೆಯಲು ಶನಿವಾರಸಂತೆ ನಾಡಕಚೇರಿಗೆ ಅರ್ಜಿ ಸಲ್ಲಿಸಿದ್ದರು.ಈ ಜಮೀನಿಗೆ ಕಂದಾಯ ನಿಗದಿ ಮಾಡಿಕೊಡಲು ನಾಡಕಚೇರಿಯ ಗ್ರಾಮ ಲೆಕ್ಕಿಗ ಜಟ್ಟಪ್ಪ ಅವರು ಐದು ಸಾವಿರದ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಇಂದು ಬೆಳಿಗ್ಗೆ ಮಲ್ಲಪ್ಪ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದರು.

ದೂರಿನ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕರಾದ ಸದಾನಂದ್ ತಿಪ್ಪಣ್ಣನವರ್ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಪೊಲೀಸ್ ನಿರೀಕ್ಷಕರುಗಳಾದ ಶ್ರೀಧರ್ ಸೇರಿದಂತೆ ಸಿಬ್ಬಂದಿಗಳು, ಇಂದು ಮಧ್ಯಾಹ್ನ 2.40ರ ಸುಮಾರಿಗೆ ಶನಿವಾರಸಂತೆ ನಾಡಕಚೇರಿಯ ಹೊರಾಂಗಣದಲ್ಲಿ, ಅರ್ಜಿದಾರ ಮುತ್ತಪ್ಪ ಅವರಿಂದ ರೂ. 5 ಸಾವಿರ ಲಂಚದ ಹಣವನ್ನು ಸ್ವೀಕರಿಸಿದ ಗ್ರಾಮ ಲೆಕ್ಕಿಗ ಜಟ್ಟಪ್ಪ ಅವರನ್ನು ವಶಕ್ಕೆ ಪಡೆದಿದ್ದಾರೆ. ಸರ್ಕಾರದಿಂದ ಸಿಗುವ ಸವಲತ್ತನ್ನು ವಿತರಿಸಲು 76 ವರ್ಷದ ವೃದ್ಧನಿಂದಲೂ ಲಂಚ ಪಡೆದ ಗ್ರಾಮ ಲೆಕ್ಕಿಗ ಜಟ್ಟಪ್ಪ ಅವರನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಎಸಿಬಿ ದಕ್ಷಿಣ ವಲಯ ಮೈಸೂರು ಪೊಲೀಸ್ ಅಧೀಕ್ಷಕ ಡಾ. ಡಿ.ಪಿ. ಸುಮನ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪಾಧೀಕ್ಷ ಸದಾನಂದ್ ನೇತೃತ್ವದ ತಂಡದ ಸಿವಿಲ್ ಹೆಡ್‍ಕಾನ್ಸ್‍ಟೇಬಲ್ ದಿನೇಶ್, ಪೊಲೀಸ್ ಕಾನ್ಸ್‍ಟೇಬಲ್‍ಗಳಾದ ಸಜನ್, ಪ್ರವೀಣ್‍ಕುಮಾರ್, ಲೋಹಿತ್, ದೀಪಿಕಾ, ಶ್ರೀಧರ್, ಶಿಲ್ಪ, ಸುರೇಶ್, ವಿಶ್ವನಾಥ್, ನರುಣ್ ಅವರುಗಳು ಭಾಗವಹಿಸಿದ್ದರು.

- ವಿಜಯ್, ನರೇಶ್, ಹೆಚ್.ಕೆ. ಜಗದೀಶ್