ವೀರಾಜಪೇಟೆ ವರದಿ, ನ.13: ನಗರಕ್ಕೆ ಹತ್ತಿರದ ಮಗ್ಗುಲ- ಕುಮ್ಮೆತೋಡು ಬಳಿ ಲೋಕೋಪಯೋಗಿ ಇಲಾಖೆ ವತಿಯಿಂದ ರೂ. 2.60 ಕೋಟಿ ವೆಚ್ಚದ ಅಪಘಾತ ವಲಯ ರಸ್ತೆ ಕಾಮಗಾರಿಯು ಪ್ರಗತಿಯಲ್ಲಿದೆ.
ಸುಪ್ರೀಂಕೋರ್ಟ್ನ ನಿರ್ದೇಶನದಂತೆ ರಾಜ್ಯ ಹೆದ್ದಾರಿ-91ರ ರಸ್ತೆ ಸರಪಳಿಗೆ 1.42ಕಿ.ಮಿ. ಉದ್ದದ ರಸ್ತೆ ತಿರುವಿನ ಅಭಿವೃದ್ಧಿ ಹಾಗೂ ‘ಸೂಪರ್ ಎಲಿವೇಶನ್’ ಕಾಮಗಾರಿ ನಡೆಯುತ್ತಿದೆ.
ಇಂದಿನವರೆಗೆ 800 ಮೀ. ಪೂರ್ಣವಾಗಿದ್ದು, ತಿಂಗಳಾಂತ್ಯಕೆ ಅಪಘಾತ ವಲಯದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಹಾಯಕ ಇಂಜಿನಿಯರ್ ಯತೀಶ್ ಮಾಹಿತಿ ನೀಡಿದ್ದಾರೆ. ರಸ್ತೆಯ ತಿರುವಿನಲ್ಲಿ 10 ಮೀಟರ್ ಹಾಗೂ ನೇರ ರಸ್ತೆಯಲ್ಲಿ 7 ಮೀಟರ್ ಅಗಲದಷ್ಟು ಇರಲಿದೆ. ಲೋಕೋಪಯೋಗಿ ಇಲಾಖೆ ಮೇಲುಸ್ತುವಾರಿಯಲ್ಲಿ ಎ.ಎ.ಉತ್ತಪ್ಪ ಗುತ್ತಿಗೆ ಪಡೆದು ಕಾಮಗಾರಿ ನಡೆಸುತ್ತಿದ್ದಾರೆ.