ಸುಂಟಿಕೊಪ್ಪ, ನ. 13: ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಗೌತಮ್ ಶಿವಪ್ಪ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡ ಪಿ.ಎಂ. ರವಿ ಅವರನ್ನು ಸುಂಟಿಕೊಪ್ಪ ಹೋಬಳಿ ಮೊಗೇರ ಸೇವಾ ಸಮಾಜದಿಂದ ಶ್ರೀ ರಾಮ ಮಂದಿರ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಹೋಬಳಿ ಮೊಗೇರ ಸಮಾಜದ ಅಧ್ಯಕ್ಷ ಮತ್ತು ಜಿಲ್ಲಾ ಸದಸ್ಯ ಪಿ.ಬಿ. ಮಂಜು ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಬಿ. ಜನಾರ್ಧನ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಬಿ.ಎಂ. ದಾಮೋದರ, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಸೀತಾರಾಮ, ಮಡಿಕೇರಿ ತಾಲೂಕು ಮಾಜಿ ಅಧ್ಯಕ್ಷ ವಸಂತ ಗರಗಂಗೂರು ಮೊಗೇರ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಕಾವೇರಿ, ಸುಂಟಿಕೊಪ್ಪ ಸಮಾಜದ ಕಾರ್ಯದರ್ಶಿ ನಾಗೇಶ್‍ಕುಮಾರ್ ಹಾಗೂ ಸದಸ್ಯರು ಹಾಜರಿದ್ದರು. ಸದಸ್ಯರಾದ ಎಂ.ಪಿ. ದೇವಪ್ಪ ಸ್ವಾಗತಿಸಿ, ವಂದಿಸಿದರು.