ಪೆÇನ್ನಂಪೇಟೆ, ನ. 13: ಮಹಿಳೆಯರ ಸಬಲೀಕರಣ ಹಾಗೂ ರೈತಾಪಿ ವರ್ಗದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ದಿ ಆರ್ಗನೈಜೇಶನ್ ಫಾರ್ ದ ಡೆವಲಪ್‍ಮೆಂಟ್ ಆಫ್ ಪೀಪಲ್ (ಓಡಿಪಿ) ಮೈಸೂರು ರೈತ ಉತ್ಪಾದಕ ಸಂಸ್ಥೆ ಹಾಗೂ ಜರ್ಮನಿಯ ಅಂದೇರಿ ಹಿಲ್ಫೆ ಇವರ ಸಹಭಾಗಿತ್ವದಲ್ಲಿ ರೈತ ಉತ್ಪನ್ನ ಕೂಟದಲ್ಲಿ ನೋಂದಾಯಿತ ಸಣ್ಣ ರೈತರಿಗೆ ರಾಸಾಯನಿಕ ಗೊಬ್ಬರ ವಿತರಣೆ ಮಾಡಲಾಯಿತು. ಗೊಬ್ಬರದ ಅವಶ್ಯಕತೆ ಇಲ್ಲದ ರೈತರಿಗೆ ಕೃಷಿ ಪರಿಕರಗಳನ್ನು ವಿತರಿಸಲಾಯಿತು.

ಪೆÇನ್ನಂಪೇಟೆ ಎಪಿಸಿಎಂಸಿ ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಪೆÇನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ ನೆರವೇರಿಸಿದರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯೆ ಆಶಾ ಪೂಣಚ್ಚ, ಓಡಿಪಿ ಸಂಸ್ಥೆ ಮೈಸೂರು ಸಂಯೋಜಕ ಜಾನ್ ರಾಡ್ರಿಗಸ್, ತೋಟಗಾರಿಕೆ ಇಲಾಖೆ ಅಧಿಕಾರಿ ರಮೇಶ್, ಪೆÇನ್ನಂಪೇಟೆ ಗ್ರಾ.ಪಂ. ಉಪಾಧ್ಯಕ್ಷೆ ಮಂಜುಳ, ಪಿಡಿಓ ಪುಟ್ಟರಾಜು, ಗ್ರಾ.ಪಂ. ಸದಸ್ಯ ಅನಿಷ್, ಓಡಿಪಿ ಯ ಜಿಲ್ಲಾ ಸಂಯೋಜಕಿ ಜಾಯ್ಸ್ ಮೆನೇಜಸ್, ರೀಟಾ ಜೋಸೆಫ್, ಧನುಕುಮಾರ್, ಧರಣಿ ಮುಂತಾದವರು ಹಾಜರಿದ್ದರು.