ಮಡಿಕೇರಿ, ನ. 13: ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಲ್ಲಿ ಚೇರಂಬಾಣೆಯ ಪಟ್ಟಮಾಡ ಕುಟುಂಬಸ್ಥರು ಪ್ರತಿವರ್ಷದಂತೆ ದೇವರಿಗೆ ನೈವೇದ್ಯ ಸೇವೆ ಸಮರ್ಪಿಸಿದರು. ವಾರ್ಷಿಕವಾಗಿ ಉಭಯ ಕ್ಷೇತ್ರಗಳಲ್ಲಿ ನಿತ್ಯಪೂಜೆಯೊಂದಿಗೆ ನೈವೇದ್ಯಕ್ಕೆ ಬೇಕಾಗುವ ಅಕ್ಕಿಯನ್ನು ಇದೇ ವೇಳೆ ಈ ಕುಟುಂಬಸ್ಥರು ಸನ್ನಿಧಾನಕ್ಕೆ ನೀಡಿದರು.
ಅಲ್ಲದೆ ಉಭಯ ಕ್ಷೇತ್ರಗಳಲ್ಲಿ ನಿತ್ಯ ನೈವೇದ್ಯಕ್ಕೆ ಬೇಕಾಗುವ ಪಾತ್ರೆಗಳನ್ನು ಕೂಡ ನೀಡುವದರೊಂದಿಗೆ; ನಿನ್ನೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಕುಟುಂಬದ ಹಿರಿಯರಾದ ತಮ್ಮಯ್ಯ, ಮಾದಪ್ಪ, ಪ್ರಕಾಶ್ ಸೇರಿದಂತೆ ಪಿ.ಡಿ. ಪೊನ್ನಪ್ಪ, ಮುತ್ತಣ್ಣ ಮೊದಲಾದವರು ಪಾಲ್ಗೊಂಡಿದ್ದರು.