ಇದುವರೆಗೆ ನಗರದಲ್ಲಿ ಸಂಗ್ರಹವಾಗುವ ಎಲ್ಲಾ ರೀತಿಯ ತ್ಯಾಜ್ಯಗಳನ್ನು ಬೆಟ್ಟದಲ್ಲಿ ಸುರಿಯಲಾಗುತ್ತಿತ್ತು. ಮಾಂಸದ ತ್ಯಾಜ್ಯಗಳನ್ನು ಹಾಕಲಾಗುತ್ತಿತ್ತು. ಇದಕ್ಕೆ ವಿರೋಧ ಬಂದ ಬಳಿಕ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆಯಾದರೂ ಒಂದಿಷ್ಟು ಬಂದು ಸೇರುತ್ತಿವೆ. ಈ ನಡುವೆ ಹಸಿಕಸ - ಒಣಕಸವನ್ನು ಪ್ರತ್ಯೇಕ ವಾಗಿ ಸಂಗ್ರಹಿಸಿ ಕೊಂಡೊಯ್ಯ ಲಾಗುತ್ತಿತ್ತು. ಇದೀಗ ಮತ್ತೆ ಎಲ್ಲವನ್ನು ಮಿಶ್ರಣ ಮಾಡಿ ಸುರಿಯಲಾಗುತ್ತಿದೆ. ಇನ್ನೂ ಮುಂದುವರಿದು ಇದೀಗ ಸರಕಾರಿ ಆಸ್ಪತ್ರೆಯ ತ್ಯಾಜ್ಯಗಳನ್ನು ಕೂಡ ಈ ಕಸದ ಬೆಟ್ಟದಲ್ಲಿ ಸುರಿಯಲಾಗುತ್ತಿದೆ! ಆಸ್ಪತ್ರೆಯ ತ್ಯಾಜ್ಯಗಳನ್ನು ಇತರ ತ್ಯಾಜ್ಯ ಗಳೊಂದಿಗೆ ಮಿಶ್ರಣ ಮಾಡುವಂತಿಲ್ಲ. ಅದರಲ್ಲೂ ಕೋವಿಡ್ ಬಂದ ಬಳಿಕ ತ್ಯಾಜ್ಯಗಳನ್ನು ಅತಿ ಸೂಕ್ಷ್ಮವಾಗಿ ಪ್ರತ್ಯೇಕ ಚೀಲಗಳಲ್ಲಿ ಸಂಗ್ರಹಿಸಿ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ಈ ತ್ಯಾಜ್ಯಗಳನ್ನು ಕೊಂಡೊಯ್ಯಲು ಮೈಸೂರಿನ ಸಂಸ್ಥೆಯೊಂದಕ್ಕೆ ಗುತ್ತಿಗೆ ಕೂಡ ನೀಡಲಾಗಿದೆ. ಆದರೆ, ಯಾರ ಅರಿವಿಗೂ ಬಾರದೆ ತ್ಯಾಜ್ಯದ ಚೀಲಗಳನ್ನು ಯಾರಿಗೂ ಕಾಣದಂತೆ ಬೆಟ್ಟದ ಮೇಲ್ಭಾಗದಲ್ಲಿ ಸುರಿಯಲಾಗಿದೆ. ಹಿಂದೆ ಬೆಳೆದಿದ್ದ ಕಸದ ರಾಶಿಯ ಮೇಲೆ ಮಣ್ಣು ಹಾಕಿ ಮುಚ್ಚಿದ್ದರಿಂದ (ಮೊದಲ ಪುಟದಿಂದ) ಇದೀಗ ಆ ಪ್ರದೇಶದಲ್ಲಿ ಕಾಡು ಬೆಳೆದಿದೆ. ಅಲ್ಲಿಗೆ ನಗರದ ಕಸಗಳನ್ನು ಸುರಿಯುತ್ತಿಲ್ಲ. ಹಾಗಾಗಿ ಅಲ್ಲಿಗೆ ಯಾರೂ ಹೋಗುತ್ತಿಲ್ಲ. ಕಾಣದ ಆ ಸ್ಥಳದಲ್ಲಿ ಆಸ್ಪತ್ರೆಯ ತ್ಯಾಜ್ಯಗಳನ್ನು ಸುರಿಯಲಾಗಿದೆ. ಅದರಲ್ಲೂ ಹಳದಿ ಹಾಗೂ ಹಸಿರು ಬಣ್ಣದ ಚೀಲಗಳನ್ನು ಹೊರ ಆವರಣದಲ್ಲಿ ಎಸೆಯುವಂತಿಲ್ಲ. ಆದರಲ್ಲಿ ಹಸಿರು, ಹಳದಿ, ನೀಲಿ, ಕಪ್ಪು ಬಣ್ಣದ ಚೀಲಗಳ ರಾಶಿ ಬಿದ್ದಿವೆ. ಇದು ಇನ್ನಷ್ಟು ಅಪಾಯಕಾರಿಯಾಗಿದ್ದು, ಇದಕ್ಕೆ ಹೊಣೆ ಯಾರು ಎಂಬದೇ ಪ್ರಶ್ನೆ.?