ಕೂಡಿಗೆ, ನ. 12: ಸೋಮವಾರಪೇಟೆ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾಗಿ ಎರಡನೇ ಬಾರಿಗೂ ಕೂಡಿಗೆಯ ಶಿವಣ್ಣ ಆಯ್ಕೆಗೊಂಡಿದ್ದಾರೆ.
ಆಯ್ಕೆ ಪ್ರಕ್ರಿಯೆ ಸೋಮವಾರಪೇಟೆಯ ಸವಿತಾ ಸಮಾಜದ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನಡೆಯಿತು. ಉಪಾಧ್ಯಕ್ಷರಾಗಿ ಎಚ್. ಪಿ. ರಾಮಕೃಷ್ಣ, ಕಾರ್ಯದರ್ಶಿಯಾಗಿ ರವೀಂದ್ರ, ಖಜಾಂಚಿಯಾಗಿ ಡಿ. ಎನ್. ಮಹೇಶ್ ಆಯ್ಕೆಗೊಂಡಿದ್ದಾರೆ. ನಿರ್ದೇಶಕರುಗಳಾಗಿ ಜಗದೀಶ್ ಭಂಡಾರಿ, ಶಂಕರ್, ಕುಮಾರ್, ನಟರಾಜು, ಬಾಲರಾಜ ಆಯ್ಕೆಯಾಗಿದ್ದಾರೆ.
ವಾರ್ಷಿಕ ಮಹಾಸಭೆಯಲ್ಲಿ ಹಾಜರಿದ್ದ ಜಿಲ್ಲಾ ಅಧ್ಯಕ್ಷ ದೂರೇಶ್ ಮಾತನಾಡಿ, ಸಮಾಜದ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು. ದಿ. ಅಶೋಕ ಗಸ್ತಿ ಅವರ ದತ್ತಿ ನಿಧಿಯಿಂದ ಕೊರೊನಾ ಸಂದರ್ಭದಲ್ಲಿ ಸಮಾಜದ ಬಾಂಧವರಿಗೆ ಸಹಕಾರ ನೀಡಲು ಅನುಕೂಲ ವಾಯಿತು. ಅಲ್ಲದೆ ಮುಂದಿನ ದಿನಗಳಲ್ಲಿ ರಕ್ತದಾನದಂತಹ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಸವಿತಾ ಸಮಾಜದ ಯುವಕರಿಗೆ ಮಾರ್ಗದರ್ಶಕರಾಗಬೇಕು ಎಂದು ತಿಳಿಸಿದರು. ಈ ಸಂದರ್ಭ ಸಮಾಜದ ಎಲ್ಲಾ ಸದಸ್ಯರು ಮತ್ತು ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು. ಬಾಲರಾಜ್ ಸ್ವಾಗತಿಸಿ, ವಂದಿಸಿದರು.