ಗೋಣಿಕೊಪ್ಪ ವರದಿ, ನ. 12: ಇಲ್ಲಿನ ಮುಳಿಯ ಜ್ಯುವೆಲ್ಲರಿಯಲ್ಲಿ ಚಿನ್ನೋತ್ಸವ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಲಾಯಿತು. ಹಿರಿಯರಾದ ರತಿ ಉತ್ತಪ್ಪ, ರೂಪ ಯತಿರಾಜ್, ಡಾ. ಚಂದ್ರಶೇಖರ್, ಕೋಣಿಯಂಡ ಕಾವ್ಯ ಸಂಜು, ಚಂದ್ರಕಲಾ, ಭೂಮಿಕಾ ಇದ್ದರು.
ಮುಳಿಯ ಜ್ಯುವೆಲ್ಸ್ ಚೇರ್‍ಮನ್ ಕೇಶವ ಪ್ರಸಾದ್ ಮುಳಿಯ, ಶಾಖಾ ವ್ಯವಸ್ಥಾಪಕ ಅಶೋಕ್ ಬಂಗೇರ ಚಿನ್ನೋತ್ಸವದ ಮಾಹಿತಿ ನೀಡಿದರು. ಈ ಸಂದರ್ಭ ನೂತನ ವಿನ್ಯಾಸಗಳ ಪ್ರದರ್ಶನ ಮಾಡಲಾಯಿತು.