ಮಡಿಕೇರಿ, ನ. 12: ಸಿರಿಗನ್ನಡ ವೇದಿಕೆ ಕೊಡಗು ಹಾಗೂ ಸಿರಿಗನ್ನಡ ವೇದಿಕೆ ಮಹಿಳಾ ಘಟಕ ಪೆÇನ್ನಂಪೇಟೆ ತಾಲೂಕು ವತಿಯಿಂದ ರಾಜ್ಯ ಮಟ್ಟದ “ಕವನ ಸ್ಪರ್ಧೆ” ಏರ್ಪಡಿಸಲಾಗಿದೆ. ಕೃಷಿ ವಿಶೇಷವಾದ ಪುತ್ತರಿ ಹಬ್ಬವನ್ನು ಕದಿರು ತೆಗೆಯುವುದರ ಮೂಲಕ ಆಚರಿಸಲಾಗುತ್ತದೆ. ಪುತ್ತರಿಯು ಕೃಷಿಗೆ ಸಂಬಂಧಿಸಿದ ಹಬ್ಬ. ಹಾಗಾಗಿ ಕೃಷಿಗೆ ಸಂಬಂಧಿಸಿದಂತೆ ಕವನ ಸ್ಪರ್ಧೆ ನಡೆಯಲಿದೆ.

ಕನ್ನಡ ಭಾಷೆಯ ಕವನವು ಇಪ್ಪತ್ತು ಸಾಲು ಮೀರದಂತಿರಬೇಕು. ಸ್ಪರ್ಧಿಗಳು ಕವನವನ್ನು ಟೈಪ್ ಮಾಡಿ ಅಥವಾ ಸ್ಫುಟವಾಗಿ ಬರೆದು ಫೆÇೀಟೊ ತೆಗೆದು 9449123119 ಈ ಸಂಖ್ಯೆಗೆ ವಾಟ್ಸಾಪ್ ಮುಖಾಂತರ ತಾ. 15ರೊಳಗೆ ಕಳುಹಿಸಬೇಕು. ಒಬ್ಬರು ಒಂದು ಕವನ ಮಾತ್ರ ಕಳುಹಿಸಬೇಕು.

ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಹಾಗೂ ಮೂರು ಮೆಚ್ಚುಗೆ ಮತ್ತು ನಾಲ್ಕು ಸಮಾದಾನಕರ ಬಹುಮಾನಗಳನ್ನು ಪ್ರಶಸ್ತಿ ಪತ್ರದ ರೂಪದಲ್ಲಿ ವಾಟ್ಸಾಪ್ ಮುಖಾಂತರ ನೀಡಲಾಗುವುದು ಎಂದು ಅಧ್ಯಕ್ಷೆ ಪೊನ್ನಂಪೇಟೆ ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ ತಿಳಿಸಿದ್ದಾರೆ.