*ಗೋಣಿಕೊಪ್ಪಲು, ನ. 12: ಮಾಯಮುಡಿ ದೊಡ್ಡಮಾಡು ಮಾನಿಲ್ ಅಯ್ಯಪ್ಪ ಕೊಡವ ಕೂಟ ವತಿಯಿಂದ ತಾ.15ರಂದು ಬೆಳಿಗ್ಗೆ 10.30 ಗಂಟೆಗೆ ಸಭೆ ಆಯೋಜಿಸಲಾಗಿದೆ.

ಮಾಯಮುಡಿಯ ಕೂಟತ್ ಮಾವು ಕೋಲ್ ಮಂದ್‍ನಲ್ಲಿ ಜರುಗಲಿರುವ ಈ ಸಭೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಅವರು ಭಾಗವಹಿಸಿ ಕೊಡವರಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ಹೋರಾಟದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.