ಕುಶಾಲನಗರ, ನ. 12: ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ನಡೆಯಿತು. ಸ್ಥಳೀಯ ಪ್ರಮುಖರಾದ ಮಧುಕುಮಾರ್ ನೇತೃತ್ವದ 12 ಸದಸ್ಯರು ಆಯ್ಕೆಗೊಂಡರು.

ಗೊಂದಿಬಸವನಹಳ್ಳಿಯ ನವೀನ, ಎಂ.ಎಸ್. ಪ್ರಸನ್ನ, ಮಧುಕುಮಾರ್, ಪಿ. ಪ್ರವೀಣ್, ರುದ್ರೇಶ್, ಸೋಮಣ್ಣ, ಎಂ.ಎನ್. ಪ್ರಕಾಶ್ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಗೊಂಡರೆ, ಡಿ.ಜಿ. ಪ್ರದೀಪ್, ಶಿವಕುಮಾರ್ ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ದಿವಾಕರ್, ಮಹಿಳಾ ವರ್ಗದಿಂದ ಉಷಾ ಹಾಗೂ ಕಮಲಮ್ಮ ಆಯ್ಕೆಯಾಗಿದ್ದಾರೆ.