ವೀರಾಜಪೇಟೆ ವರದಿ, ನ. 12: ತಾಲೂಕು ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ವಾರ್ಷಿಕ ಕಾಲು ಬಾಯಿ ಲಸಿಕೆ ಮಾಡುವ ಕಾರ್ಯ ಚುರುಕುಗೊಂಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಸಹಾಯಕ ನಿರ್ದೇಶಕ ಡಾ. ಎ.ಬಿ. ತಮ್ಮಯ್ಯ, ಕೊರೊನಾ ಕಾರಣ ಮೊದಲ ಸುತ್ತಿನ ಲಸಿಕೆ ಕಾರ್ಯ ಕ್ರಮಕ್ಕೆ ಸ್ವಲ್ಪ ಅಡಚಣೆಯಾಯಿತು. 21 ಸಿಬ್ಬಂದಿಗಳನ್ನೊಳಗೊಂಡ ನಾಲ್ಕು ತಂಡ ರಚಿಸಿದ್ದೇವೆ. ತಿಂಗಳಾಂತ್ಯಕ್ಕೆ ಮೊದಲ ಅವಧಿಯ ಲಸಿಕೆ ಮುಗಿಸಲು ಕಾರ್ಯಯೋಜನೆ ರೂಪಿಸಿz್ದÉೀವೆ. ವೀರಾಜಪೇಟೆ ತಾಲೂಕಿನಾದ್ಯಂತ ಸುಮಾರು 23,000 ಜಾನುವಾರುಗಳಿಗೆ ಲಸಿಕೆಯನ್ನು ಉಚಿತವಾಗಿ ಮಾಡಿಕೊಡುತ್ತೇವೆ. ರೈತ ಮಿತ್ರರು ಇದರ ಪ್ರಯೋಜನ ಪಡೆದುಕೊಂಡು ಕಾಲು ಬಾಯಿ ಜ್ವರದಿಂದ ಜಾನುವಾರುಗಳನ್ನು ರಕ್ಷಿಸಿಕೊಳ್ಳ ಬಹುದು ಎಂದು ತಿಳಿಸಿದ್ದಾರೆ.