*ಗೋಣಿಕೊಪ್ಪಲು, ನ. 12: ರೂ. 43 ಲಕ್ಷ ಅನುದಾನದಲ್ಲಿ ಶ್ರೀಮಂಗಲ ಪಶುವೈದÀ್ಯ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.

ರೈತಾಪಿ ವರ್ಗದ ಅನುಕೂಲ ಕ್ಕಾಗಿ ಜಾನುವಾರುಗಳ ಉತ್ತಮ ಚಿಕಿತ್ಸೆಗಾಗಿ ವ್ಯವಸ್ಥಿತ ಪಶು ವೈದ್ಯಕೀಯ ಆಸ್ಪತ್ರೆ ನಿರ್ಮಾಣ ಮಾಡುವ ಉದ್ದೇಶ ದಿಂದ ಜಿಲ್ಲೆಯ 4 ಗ್ರಾಮಗಳಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದೆ ಎಂದು ಅವರು ಹೇಳಿದರು. ಪೌತಿ ಖಾತೆ ಆಂದೋಲನಕ್ಕೆ ಈಗಾಗಲೇ ಚಾಲನೆ ದೊರೆತಿದೆ. ರೈತರು ಹಾಗೂ ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಂಞಂಗಡ ಅರುಣ್ ಭೀಮಯ್ಯ, ತಾ.ಪಂ. ಸದಸ್ಯೆ ಸರೋಜ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶರೀನ್ ಸುಬ್ಬಯ್ಯ, ತಾಲೂಕು ಅಧ್ಯಕ್ಷ ನೆಲ್ಲೀರ ಚಲನ್, ಆರ್.ಎಂ.ಸಿ. ಉಪಾಧ್ಯಕ್ಷ ಕಳ್ಳಂಗಡ ಬಾಲಕೃಷ್ಣ, ಸ್ಥಳೀಯ ಗ್ರಾ.ಪಂ. ಸದಸ್ಯೆ ಚೌಕಿರ ಕಲ್ಪನಾ, ಆರ್.ಎಂ.ಸಿ. ಸದಸ್ಯ ಕಟ್ಟೇರ ಈಶ್ವರ, ಪ್ರಮುಖರಾದ ಅಜ್ಜಮಾಡ ಜಯ ಸೇರಿದಂತೆ ಗ್ರಾಮಸ್ಥರು, ತಾಲೂಕು ಪಶು ವೈದ್ಯಾಧಿಕಾರಿ ತಿಮ್ಮಯ್ಯ ಹಾಜರಿದ್ದರು.