ಸುಂಟಿಕೊಪ್ಪ, ನ. 12: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಕಂಬ ಹಾಗೂ ತಂತಿಯಿಂದ ಗುಡ್ಡಪ್ಪ ರೈ ಬಡಾವಣೆ ನಿವಾಸಿಗಳು ಆತಂಕಗೊಂಡಿದ್ದಾರೆ.
ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಕೆಳ ಭಾಗದ ಗುಡ್ಡಪ್ಪ ರೈ ಬಡಾವಣೆಯಲ್ಲಿ ಮನೆಗಳ ಸಮೀಪದಲ್ಲಿ ಸೆಸ್ಕ್‍ನಿಂದ ಅಳವಡಿಸಿದ್ದ ವಿದ್ಯುತ್ ಕಂಬ ಮತ್ತು ವಯರ್‍ಗಳಿಗೆ ಕಾಡು ಮರಗಿಡಗಳು ಮುತ್ತಿಕೊಂಡಿವೆ. ಇದರಿಂದ ಪಕ್ಕದ ಆರ್‍ಸಿಸಿ ಕಟ್ಟಡದ ಸಮೀಪಕ್ಕೆ ಈ ಮರಗಿಡಗಳ ಕೊಂಬೆಗಳು ವಾಲಿಕೊಂಡಿದ್ದು ಇದರಿಂದ ವಿದ್ಯುತ್ ಸ್ಪರ್ಶವಾಗಿ ಪ್ರಾಣಹಾನಿಯಾಗುವ ಸಂಭವವಿದೆ ಎಂದು ಈ ಭಾಗದ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.