*ಗೋಣಿಕೊಪ್ಪಲು, ನ. 12: ರಾಜ್ಯಗಳ ಉಪಚುನಾವಣೆಯಲ್ಲಿ ಬಿಜೆಪಿ ಶಿರಾ ಹಾಗೂ ರಾಜೇಶ್ವರಿ ನಗರದಲ್ಲಿ ಸಾಧಿಸಿದ ಭಾರೀ ಅಂತರದ ಜಯವನ್ನು ಸ್ವಾಗತಿಸಿ ಗೋಣಿಕೊಪ್ಪಲು ಬಿಜೆಪಿ ಕಾರ್ಯಕರ್ತರು ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು.
ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ಕಾರ್ಯಕರ್ತರು ಸಿಹಿ ಹಂಚಿ ಬಿಜೆಪಿ ಜಯವನ್ನು ಸಂಭ್ರಮಿಸಿದರು. ಮೋದಿ ಸರ್ಕಾರದ ಉತ್ತಮ ಆಡಳಿತವೇ ಜನರಲ್ಲಿ ಸಕಾರತ್ಮಕ ಭಾವನೆ ಮೂಡಲು ಸಾಧ್ಯವಾಗಿದೆ. ದೇಶವನ್ನು ಅಭಿವೃದ್ಧಿಯತ್ತ ಸಾಗಿಸುತ್ತಿದ್ದಾರೆ ಎಂಬ ಭರವಸೆಯಿಂದ ಜನತೆ ಬಿಜೆಪಿ ಪಕ್ಷದ ಪರ ಒಲವು ತೋರುತ್ತಿದ್ದಾರೆ ಎಂದು ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಬಿಜೆಪಿಯ ಆಡಳಿತದ ಕಾರ್ಯವೈಖರಿಯ ಬಗ್ಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿದರು.
ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಚೇಂದಂಡ ಸುಮಿ ಸುಬ್ಬಯ್ಯ ಅವರು, ದೇಶ ಸುಭೀಕ್ಷೆಯಾಗಿ ಇರಲು ಹಾಗೂ ಅಭಿವೃದ್ಧಿ ಸಾಗಲು ಮೋದಿ ಅಂತಹ ಪ್ರಧಾನ ಮಂತ್ರಿಗಳ ಅಗತ್ಯ ಈ ವಿಚಾರವನ್ನು ಅರಿತ ಪ್ರಜ್ಞಾವಂತ ನಾಗರಿಕರು ಬಿಜೆಪಿಯನ್ನು ಗೆಲ್ಲಿಸುವ ಮೂಲಕ ದೇಶ ಅಭಿವೃದ್ಧಿಯತ್ತ ಸಾಗಲು ಕೈಜೋಡಿಸುತ್ತಿದ್ದಾರೆ ಎಂದು ಹೇಳಿದರು.
ಸಂಭ್ರಮಾಚರಣೆಯಲ್ಲಿ ಗೋಣಿಕೊಪ್ಪಲು ನಗರ ಶಕ್ತಿ ಕೇಂದ್ರ ಅಧ್ಯಕ್ಷ ಸುರೇಶ್ ರೈ, ಗ್ರಾ.ಪಂ. ಸದಸ್ಯ ರಾಮಕೃಷ್ಣ, ಶಕ್ತಿ ಕೇಂದ್ರ ಅಧ್ಯಕ್ಷ ನೂರೇರ ರಂಜಿ, ತಾಲೂಕು ಮಹಿಳಾ ಮೋರ್ಚಾ ಕಾರ್ಯದರ್ಶಿ ನೂರೇರ ರತಿ ಅಚ್ಚಪ್ಪ, ಓಬಿಸಿ ಘಟಕ ಅಧ್ಯಕ್ಷ ಕೆ. ರಾಜೇಶ್, ಒಬಿಸಿ ಉಪಾಧ್ಯಕ್ಷ ಸುಬ್ರಮಣಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಕೀಂ, ಪ್ರಧಾನ ಕಾರ್ಯದರ್ಶಿ ಸಾಜಿ, ಅಲ್ಪಸಂಖ್ಯಾತ ರಾಜ್ಯ ಘಟಕದ ಸದಸ್ಯ ಚೆರ್ದು, ಕೃಷಿ ಮೋರ್ಚ ಸದಸ್ಯ ಚಿಮ್ಮಣಮಾಡ ಪೆÇನ್ನಪ್ಪ, ಯುವಮೋರ್ಚ ಪ್ರಧಾನ ಕಾರ್ಯದರ್ಶಿ ವಿವೇಕ್, ಯಶ್ವಿನ್ ಪೆÇನ್ನಣ್ಣ, ಬೊಜ್ಜಂಗಡ ಬೋಪಣ್ಣ, ಆಟೋ ಚಾಲಕರ ಸಂಘದ ಅಧ್ಯಕ್ಷ ಜಿಮ್ಮ ಸುಬ್ಬಯ್ಯ, ಪ್ರಮುಖರಾದ ಗಾಂಧಿ ದೇವಯ್ಯ, ನರಸಿಂಹ, ಪ್ರವೀಣ್ ಸೇರಿದಂತೆ ನಗರ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.