ಮಡಿಕೇರಿ, ನ. 12: ಪ್ರೊ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ತಾ. 29 ರಂದು ನಡೆಯುವ ಸಂವಾದ ಕಾರ್ಯಕ್ರಮದ ಪೂರ್ವಭಾವಿ ಸಭೆ ಸುಂಟಿಕೊಪ್ಪದ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಸಮಿತಿಯ ಕೊಡಗು ಉಸ್ತುವಾರಿ ರಾಜ್ಯ ಸಂಘಟನಾ ಸಂಚಾಲಕ ವಿಜಯ ನರಸಿಂಹ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಾ. 29 ರಂದು ಮಡಿಕೇರಿಯಲ್ಲಿ ಒಳಮೀಸಲಾತಿ ಕುರಿತು ಏರ್ಪಡಿಸಿ ರುವ ಸಂವಾದ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭ ಸಮಿತಿಯ ಕೊಡಗು ಜಿಲ್ಲಾ ಘಟಕವನ್ನು ಅಧಿಕೃತ ಗೊಳಿಸಿ ಜಿಲ್ಲಾ ಸಂಚಾಲಕರನ್ನಾಗಿ ಕುಶಾಲನಗರ ಮಾದಪಟ್ಟಣದ ಹೆಚ್.ಜೆ. ದಾಮೋದರ್ ಅವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಂಘಟನಾ ಸಂಚಾಲಕರುಗಳಿಗೆ ವಿವಿಧ ವಿಭಾಗಗಳ ಜವಾಬ್ದಾರಿಯನ್ನು ನೀಡಲಾಯಿತು.

ಚರ್ಮ ಕಾರ್ಮಿಕ, ಪೌರಕಾರ್ಮಿಕರ ವಿಭಾಗದ ಮುಖ್ಯಸ್ಥರನ್ನಾಗಿ ರಂಗಣ್ಣ, ಆಂತರಿಕ ಶಿಸ್ತು ಮತ್ತು ತರಬೇತಿ ವಿಭಾಗಕ್ಕೆ ಹೆಚ್. ಮಹದೇವ್, ಕುಂದು ಕೊರತೆಗಳ ವಿಭಾಗಕ್ಕೆ ಹೆಚ್.ಎಲ್. ಕುಮಾರ್, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿಭಾಗಕ್ಕೆ ನಾಸರ್ ಪಾಲಿಬೆಟ್ಟ, ಪ್ರಕಾಶನ ವಿಭಾಗಕ್ಕೆ ಎಂ.ಎಸ್. ಶೇಖರ್, ಅಂತರ್ ಜಿಲ್ಲಾ ಸಂವಹನ ವಿಭಾಗಕ್ಕೆ ಹೆಚ್. ಮಂಜುನಾಥ್, ಅಸಂಘಟಿತ ಕಾರ್ಮಿಕ ವಿಭಾಗಕ್ಕೆ ಹೆಚ್.ಜಿ. ರಘು