ವೀರಾಜಪೇಟೆ ವರದಿ, ನ. 12: ಇಲ್ಲಿನ ಗೃಹರಕ್ಷಕ ದಳ ಘಟಕದಿಂದ ಕೊರೊನಾ ಸೋಂಕು ತಡೆಗಟ್ಟಲು ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿತ್ತು.

ನಗರದ ಪ್ರಮುಖ ಸ್ಥಳಗಳಲ್ಲಿ ಸೋಂಕು ತಡೆಗಟ್ಟುವ ವಿಧಾನಗಳ ಬ್ಯಾನರ್, ಬಿತ್ತಿಪತ್ರ ಹಂಚಿ ಜಾಗೃತಿ ಮೂಡಿಸಲಾಯಿತು.

ವೀರಾಜಪೇಟೆ ಗೃಹ ರಕ್ಷಕ ದಳದ ಘಟಕಾಧಿಕಾರಿ ಹೆಚ್.ಸಿ. ತಿಮ್ಮು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.