ಕೂಡಿಗೆ, ನ. 11: ಕೂಡು ಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ಬೃಂದಾವನ ಉದ್ಯಾನವನದ ವೀಕ್ಷಣೆಗೆ ಸಧ್ಯದಲ್ಲೇ ಅವಕಾಶ ಕಲ್ಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಕಾರ್ಯಪಾಲಕ ಅಭಿಯಂತರ ರಾಜೇಗೌಡ ತಿಳಿಸಿದ್ದಾರೆ.ಬೃಂದಾವನ ವೀಕ್ಷಣೆಯನ್ನು ಕೊರೊನಾ ಹಿನ್ನೆಲೆ ಸರಕಾರದ ನಿಯಮಾನುಸಾರ ಸ್ಥಗಿತ ಗೊಳಿಸಲಾಗಿತ್ತು. ಇದೀಗ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ನಂತರ ಕಾವೇರಿ ನೀರಾವರಿ ನಿಗಮದ ಆದೇಶದಂತೆ ಮತ್ತು ಕೊರೊನಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಅವಕಾಶ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.ಹಾರಂಗಿ ಬೃಂದಾವನ ವೀಕ್ಷಣೆಗೆ ಅವಕಾಶ ಮಾಡಿ ಕೊಡುವಂತೆ ಕೂಡು ಮಂಗಳೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಭಾಸ್ಕರ್ ನಾಯಕ ಮತ್ತು ಸ್ಥಳೀಯ ಗ್ರಾಮಸ್ಥರು ಹಾರಂಗಿ ಅಧಿಕಾರಿಗಳಿಗೆ ಮತ್ತು ಕ್ಷೇತ್ರದ ಶಾಸಕರಿಗೆ ಈ ಹಿಂದೆ ವೀಕ್ಷಣೆಗೆ ಅವಕಾಶ ನೀಡುವಂತೆ ಮನವಿಯನ್ನು ಸಲ್ಲಿಸಿದ್ದರು.

ಈಗಾಗಲೇ ಪ್ರವಾಸಿಗರಿಗೆ ವೀಕ್ಷಣೆ ಅವಕಾಶದ ಚೀಟಿಯನ್ನು ಕೊಡುವ ಕೊಠಡಿಯನ್ನು ಸಿದ್ದಮಾಡ ಲಾಗಿದೆ. ಇದರ ಜೊತೆಗೆ ಉದ್ಯಾನ ವನದ ಸುತ್ತಮುತ್ತಲಿನ

ಶುಚಿತ್ವದ ಕಾರ್ಯ ಕೂಡ ಮುಕ್ತಾಯಗೊಂಡಿದೆ.