ನಾಪೋಕ್ಲು, ನ. 10: ನೆಲಜಿ ಗ್ರಾಮದ ಮಣವಟ್ಟಿರ ಜಗದೀಶ್ ಹಾಗೂ ದೇವಕಿ ಅವರ ಮೇಲೆ ದಾರಿ ತಡೆದು ಹಲ್ಲೆ ನಡೆಸಿ ಬೆದರಿಕೆಯೊಡ್ಡಿ ಪರಾರಿಯಾಗಿರುವವರನ್ನು ಕೂಡಲೇ ಬಂಧಿಸಬೇಕು ತಪ್ಪಿದಲ್ಲಿ ತೀವ್ರ ತರಹದ ಪ್ರತಿಭಟನೆಯನ್ನು ಹಮ್ಮಿಕೊಳ್ಳ ಲಾಗುವುದು ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆ ಜಮಾಯಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಪ್ಪಿದಲ್ಲಿ ನಾಪೋಕ್ಲು ಪಟ್ಟಣದಲ್ಲಿ ಗುರುವಾರ ತೀವ್ರ ತರಹದ ಪ್ರತಿಭಟನೆಯನ್ನು ಹಮ್ಮಿಕೊಳ್ಳ ಲಾಗುವುದು ಎಂದು ಎಚ್ಚರಿಸಿದ್ದಾರೆ. ಅಮಾಯಕರ ಮೇಲೆ ಅನಾವಶ್ಯಕವಾಗಿ ಹಲ್ಲೆ ನಡೆಸಲಾಗುತ್ತಿದೆ. ಭಾನುವಾರ ಸಂಜೆ ದಾರಿಂiÀÀುಲ್ಲಿ ತಡೆದು ಹಲ್ಲೆ ನಡೆಸಿದ್ದು ಖಂಡನೀಯ. ಇದು ಪುನರಾವರ್ತನೆಯಾಗಬಾರದು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ಆ ಮೂಲಕ ಸಮಾಜಕ್ಕೆ ಪೊಲೀಸ್ ಇಲಾಖೆಯ ಮೂಲಕ ಉತ್ತಮ ಸಂದೇಶ ರವಾನೆಯಾಗಬೇಕು ಎಂದರು.

ಈ ಸಂದರ್ಭ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಕೇಟೋಳಿರ ಹರೀಶ್‍ಪೂವಯ್ಯ, ಬಿ.ಎಂ. ಪ್ರತಿಪ, ಕಂಗಾಂಡ ಜಾಲಿಪೂವಪ್ಪ, ಕೇಲೆಟ್ಟೀರ ತಪ್ಪಿದಲ್ಲಿ ನಾಪೋಕ್ಲು ಪಟ್ಟಣದಲ್ಲಿ ಗುರುವಾರ ತೀವ್ರ ತರಹದ ಪ್ರತಿಭಟನೆಯನ್ನು ಹಮ್ಮಿಕೊಳ್ಳ ಲಾಗುವುದು ಎಂದು ಎಚ್ಚರಿಸಿದ್ದಾರೆ. ಅಮಾಯಕರ ಮೇಲೆ ಅನಾವಶ್ಯಕವಾಗಿ ಹಲ್ಲೆ ನಡೆಸಲಾಗುತ್ತಿದೆ. ಭಾನುವಾರ ಸಂಜೆ ದಾರಿಂiÀÀುಲ್ಲಿ ತಡೆದು ಹಲ್ಲೆ ನಡೆಸಿದ್ದು ಖಂಡನೀಯ. ಇದು ಪುನರಾವರ್ತನೆಯಾಗಬಾರದು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ಆ ಮೂಲಕ ಸಮಾಜಕ್ಕೆ ಪೊಲೀಸ್ ಇಲಾಖೆಯ ಮೂಲಕ ಉತ್ತಮ ಸಂದೇಶ ರವಾನೆಯಾಗಬೇಕು ಎಂದರು.

ಈ ಸಂದರ್ಭ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಕೇಟೋಳಿರ ಹರೀಶ್‍ಪೂವಯ್ಯ, ಬಿ.ಎಂ. ಪ್ರತಿಪ, ಕಂಗಾಂಡ ಜಾಲಿಪೂವಪ್ಪ, ಕೇಲೆಟ್ಟೀರ ಮನುಮಹೇಶ್, ಬಾಳೆಯಡ ಶಿವು, ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ಹಾಜರಿದ್ದರು.

-ದುಗ್ಗಳ