ಸುಂಟಿಕೊಪ್ಪ, ನ. 10: ಸುಂಟಿಕೊಪ್ಪದಲ್ಲಿ ಗಾಂಜಾ ವ್ಯಸನಿಯೊಬ್ಬ ಕೈಯಲ್ಲಿ ಚಾಕು ಹಿಡಿದು ಸಂತೆಯಲ್ಲಿ ವ್ಯಾಪಾರಸ್ಥರನ್ನು ಗ್ರಾಹಕರನ್ನು ಕೊಲೆ ಮಾಡುವುದಾಗಿ ಬೆದರಿಸುತ್ತಾ ಆತಂಕ ಸೃಷ್ಟಿಸಿದ ಘಟನೆ ನಡೆಯಿತು.

ಸುಂಟಿಕೊಪ್ಪ 1ನೇ ವಿಭಾಗದ ಜನತಾ ಕಾಲೋನಿ ನಿವಾಸಿಯಾದ ಮಣಿಕಂಠ ಗಾಂಜಾ ವ್ಯಸನಿಯಾಗಿದ್ದು ಗಾಂಜಾ ಇಲ್ಲದ ಸಂದರ್ಭ ಫಿವಿಬಾಂಡ್ ಸೇವಿಸಿ ಸುಂಟಿಕೊಪ್ಪದಲ್ಲಿ ದಾಂಧಲೆ ನಡೆಸುವುದು ಯುವತಿಯರನ್ನು ಚುಡಾಯಿಸುವುದರ ಬಗ್ಗೆ ಸಾರ್ವಜನಿಕರು ಹಲವಾರು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಆತ ತನ್ನ ಚಾಳಿಯನ್ನು ಮುಂದುವರಿಸಿದ್ದಾನೆ ಎಂಬ ಆರೋಪ ವ್ಯಕ್ತವಾಗಿದೆ.