ಮಡಿಕೇರಿ ನ. 10: ಭಾಗಮಂಡಲದ ಚೆಟ್ಟಿಮಾನಿಯಲ್ಲಿರುವ ಶ್ರೀಕೃಷ್ಣ ಗೋಶಾಲೆಗೆ ಕೊಡಗಿನಲ್ಲಿರುವ ಸೀರ್ವಿ ಸಮಾಜ (ರಾಜಸ್ಥಾನ) ಕೊಡುಗೆ ನೀಡಿದೆ. ಗೋವುಗಳಿಗಾಗಿ 2000 ಲೀಟರ್‍ನ ನೀರಿನ ಟ್ಯಾಂಕ್, ಕೆರೆಯಿಂದ ನೀರನ್ನು ಮೇಲೆತ್ತಲು ಮೋಟರ್ ಮತ್ತು ಪೈಪ್, ಬೇಲಿ ನಿರ್ಮಾಣಕ್ಕೆ 3 ರೋಲ್ ತಂತಿ ಹಾಗೂ ಒಂದು ಪಿಕಪ್ ಒಣಹುಲ್ಲನ್ನು ನೀಡಿದ್ದಾರೆ. ಸುಮಾರು 70 ಗೋವುಗಳಿಗೆ ಆಶ್ರಯ ನೀಡಿರುವ ಶ್ರೀ ಕೃಷ್ಣ ಗೋಶಾಲೆಗೆ ಸಹಾಯ ಮಾಡುವವರು ಮೊ.ಸಂ 94801 80456 ಅಥವಾ 78992 60138 ನ್ನು ಸಂಪರ್ಕಿಸಬಹುದಾಗಿದೆ. ಎಂದು ಗೋಶಾಲೆ ಪ್ರಮುಖ ಹರೀಶ್ ಆಚಾರ್ಯ ತಿಳಿಸಿದ್ದಾರೆ.