ಪೆರಾಜೆ, ನ. 11: ಇಲ್ಲಿಯ ಯುವಶಕ್ತಿ ಕ್ರೀಡಾ ಮತ್ತು ಕಲಾ ಹವ್ಯಾಸಿ ಸಂಘದ ವತಿಯಿಂದ, ಸಂಘದ ಸ್ಥಾಪಕಾಧ್ಯಕ್ಷ ಹಾಗೂ ಜ್ಯೋತಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ದೊಡ್ಡಣ್ಣ ಬರಮೇಲು ಅವರನ್ನು ಸನ್ಮಾನಿಸಲಾ ಯಿತು. ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಅವರನ್ನು ಪಂಚಾಯತ್ ಸಭಾಂಗಣ ದಲ್ಲಿ ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೆಸರ ವಿಶ್ವನಾಥ್ ಕುಂಬಳಚೇರಿ ಅವರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಸಂಘದ ಅಧ್ಯಕ್ಷ ಪ್ರಸನ್ನ ನೆಕ್ಕಿಲ ಪ್ರಾಸ್ತಾವಿಕ ಮಾತನಾಡಿದರು.
ಅಭಿನಂದನಾ ಭಾಷÀಣ ಮಾಡಿದ ಕೊಡಗು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾಮಕ್ಕೆ ಸನ್ಮಾನಿತರು ನೀಡಿರುವ ಕೊಡುಗೆ ಅಪಾರವಾದುದು. ದೊಡ್ಡಣ್ಣ ಬರಮೇಲು ಅವರು ಲಗೋರಿ ದೊಡ್ಡಣ್ಣ ಎಂದೇ ಪ್ರಸಿದ್ಧಿ ಹೊಂದಿದ್ದು, ಇವರು ಮರೆಯಾಗುತ್ತಿರುವ ಜಾನಪದ ಕ್ರೀಡೆಯಾದ ಲಗೋರಿಗೆ ಹೊಸ ನಿಯಮಗಳನ್ನು ಬರೆದು ರಾಜ್ಯಮಟ್ಟ ದಲ್ಲಿ ಗುರುತಿಸುವಂತೆ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ ಮಾತ್ರ ವಲ್ಲದೆ ಕಬಡ್ಡಿ, ಬಾಲ್ ಬ್ಯಾಡ್ಮಿಂಟನ್ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಇವರ ಸಾಧನೆಗಳು ಅಪಾರವಾದದ್ದು.
ಸ್ವತಃ ಆಟಗಾರನಾಗಿ, ದೈಹಿಕ ಶಿಕ್ಷಕನಾಗಿ ಅನೇಕ ಗ್ರಾಮೀಣ ಕ್ರೀಡಾಪಟುಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಲು ಕಾರಣಿ ಕರ್ತರು. ಅಲ್ಲದೆ ಅವರ ಸಾಹಿತ್ಯ ಕ್ಷೇತ್ರದಲ್ಲಿ ಬರೆದ ಪುಸ್ತಕಗಳನ್ನು ನೆನಪಿಸಿ ಕೊಂಡರು. ಈ ಸಂದರ್ಭ ಮಾಜಿ ಪಂಚಾಯತ್ ಅಧ್ಯಕ್ಷ ಹೊನ್ನಪ್ಪ ಅಮೆಚೂರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರೇಖಾ, ಮಾಜಿ ಪಂಚಾಯತ್ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಯುವಶಕ್ತಿ ಮಾಜಿ ಕಾರ್ಯದರ್ಶಿ ಅಶೋಕ್ ಪೀಚೆಮನೆ, ಚಿಗುರು ಯುವಕಮಂಡಲದ ಅಧ್ಯಕ್ಷ ಕಿರಣ್ ಕುಂಬಳಚೇರಿ ಸನ್ಮಾನಿತರಿಗೆ ಶುಭಹಾರೈಸಿದರು. ಸೀತಾರಾಮ ಕದಿಕಡ್ಕ ಪ್ರಾರ್ಥಿಸಿದರು, ಮಹೇಶ್ ಮೂಲೆಮಜಲು ಸ್ವಾಗತಿಸಿ, ಜಗದೀಶ್ ಕುಂಬಳಚೇರಿ ವಂದಿಸಿದರು.
ಈ ಸಂದರ್ಭದಲ್ಲಿ ಯುವಶಕ್ತಿಯ ಪದಾಧಿಕಾರಿಗಳು ಸದಸ್ಯರು ಸೇರಿದಂತೆ, ಗ್ರಾಮಸ್ಥರು ಹಾಜರಿದ್ದರು.