ನಾಪೆÉÇೀಕ್ಲು, ನ. 10: ನೆಲಜಿ ಗ್ರಾಮದ ಅಂಬಲ ಮಹಿಳಾ ಸಮಾಜದ ವತಿಯಿಂದ ತಾ. 14 ರಂದು ಜಿಲ್ಲಾ ಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನೆಲಜಿ ಅಂಬಲ ಶಾಲಾ ಮೈದಾನದಲ್ಲಿ 0.22 ವಿಭಾಗದಲ್ಲಿ ಸಾರ್ವಜನಿಕ ಮಹಿಳೆಯರಿಗೆ ಮತ್ತು ಗಂಡಸರಿಗೆ ಸ್ಪರ್ಧೆ ಬೆಳಿಗ್ಗೆ 9.30 ಗಂಟೆಗೆ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಉಪ ಅರಣ್ಯಾಧಿಕಾರಿ ಮುಕ್ಕಾಟೀರ ವಿಜೂ ಅಪ್ಪಣ್ಣ ಮಾಡಲಿದ್ದು, ಮಂಡೀರ ಸರೆÀೂೀಜ ದೇವಯ್ಯ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಮುಕ್ಕಾಟೀರ ದೇಚಮ್ಮ ವಿನಯï, ಬದ್ದಂಜಟ್ಟೀರ ರಾಣಿ ಅಯ್ಯಪ್ಪ ಮತ್ತು ಅಪ್ಪುಮಣಿಯಂಡ ಸರೋಜ ನಾಣಯ್ಯ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮವು ಅಪರಾಹ್ನ 4 ಗಂಟೆಗೆ ಸಮಾಜದ ಅಧ್ಯಕ್ಷೆ ಮಣವಟ್ಟೀರ ಕಮಲ ಬೆಳ್ಯಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗೆದ್ದವರಿಗೆ ಬಹುಮಾನ ನೀಡಲಾಗುವುದು ಎಂದು ಸಮಾಜದ ಆಡಳಿತ ಮಂಡಳಿ, ಸದಸ್ಯರು ತಿಳಿಸಿದ್ದಾರೆ.