ಸೋಮವಾರಪೇಟೆ, ನ. 10: ಐತಿಹಾಸಿಕ ಹಿನ್ನೆಲೆ ಹೊಂದಿರುವ, ಸೋಮವಾರಪೇಟೆ ಭಾಗದ ಪ್ರಧಾನ ದೇವಾಲಯ ಎಂದೇ ಕರೆಯಲ್ಪಡುವ ಹಾನಗಲ್ಲು ಗ್ರಾಮದ ದುದ್ದುಗಲ್ಲು ಶ್ರೀ ಮಲ್ಲಿಕಾರ್ಜುನ ದೇವಾಲಯ ಪುನರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ದೇವಾಲಯದ ಗರ್ಭಗುಡಿ ನಿರ್ಮಾಣಕ್ಕೆ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಚಾಲನೆ ನೀಡಲಾಯಿತು.

ರೂ. 3 ಕೋಟಿ ವೆಚ್ಚದಲ್ಲಿ ಭವ್ಯ ದೇವಾಲಯ ನಿರ್ಮಾಣಕ್ಕೆ ಆದಿಚುಂಚನಗಿರಿ ಮಠದ ಉಸ್ತುವಾರಿ ಯಲ್ಲಿ ಚಾಲನೆ ನೀಡಲಾಗಿದ್ದು, ಗರ್ಭಗುಡಿ ನಿರ್ಮಾಣದ ಅಡಿಗಲ್ಲಿಗೆ ಆದಿಚುಂಚನಗಿರಿ ಹಾಸನ-ಕೊಡಗು ಶಾಖಾ ಮಠದ ಉಸ್ತುವಾರಿ ಶ್ರೀ ಶಂಭುನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಶಿಲಾನ್ಯಾಸ ನೆರವೇರಿಸಲಾಯಿತು.

ಸುಮಾರು 68 ಎಕರೆ ಪ್ರದೇಶವನ್ನು ಸೋಮವಾರಪೇಟೆ, ನ. 10: ಐತಿಹಾಸಿಕ ಹಿನ್ನೆಲೆ ಹೊಂದಿರುವ, ಸೋಮವಾರಪೇಟೆ ಭಾಗದ ಪ್ರಧಾನ ದೇವಾಲಯ ಎಂದೇ ಕರೆಯಲ್ಪಡುವ ಹಾನಗಲ್ಲು ಗ್ರಾಮದ ದುದ್ದುಗಲ್ಲು ಶ್ರೀ ಮಲ್ಲಿಕಾರ್ಜುನ ದೇವಾಲಯ ಪುನರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ದೇವಾಲಯದ ಗರ್ಭಗುಡಿ ನಿರ್ಮಾಣಕ್ಕೆ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಚಾಲನೆ ನೀಡಲಾಯಿತು.

ರೂ. 3 ಕೋಟಿ ವೆಚ್ಚದಲ್ಲಿ ಭವ್ಯ ದೇವಾಲಯ ನಿರ್ಮಾಣಕ್ಕೆ ಆದಿಚುಂಚನಗಿರಿ ಮಠದ ಉಸ್ತುವಾರಿ ಯಲ್ಲಿ ಚಾಲನೆ ನೀಡಲಾಗಿದ್ದು, ಗರ್ಭಗುಡಿ ನಿರ್ಮಾಣದ ಅಡಿಗಲ್ಲಿಗೆ ಆದಿಚುಂಚನಗಿರಿ ಹಾಸನ-ಕೊಡಗು ಶಾಖಾ ಮಠದ ಉಸ್ತುವಾರಿ ಶ್ರೀ ಶಂಭುನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಶಿಲಾನ್ಯಾಸ ನೆರವೇರಿಸಲಾಯಿತು.

ಸುಮಾರು 68 ಎಕರೆ ಪ್ರದೇಶವನ್ನು ಹೊಂದಿರುವ, ಪ್ರಕೃತಿ ಸೌಂದರ್ಯದ ನಡುವೆ ಜುಳುಜುಳು ಹರಿಯುವ ಹೊಳೆ ದಂಡೆಯ ಮೇಲ್ಭಾಗದಲ್ಲಿ ನೂತನ ದೇವಾಲಯ ನಿರ್ಮಾಣವಾಗಲಿದ್ದು, ನೂರಾರು ವರ್ಷಗಳ ಹಿಂದೆ ನಿರ್ಮಾಣಗೊಂಡು ಇದೀಗ ಶಿಥಿಲಾವಸ್ಥೆಗೆ ತಲುಪಿರುವ ಹಳೆಯ ದೇವಾಲಯವನ್ನು ತೆರವುಗೊಳಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಇದರೊಂದಿಗೆ ದೇವಾಲಯ ಆವರಣದಲ್ಲಿ ಕಲ್ಲಿನ ಕೆತ್ತನೆ ಕೆಲಸಕಾರ್ಯಗಳು ನಡೆಯುತ್ತಿದ್ದು, ಶೀಘ್ರದಲ್ಲಿಯೇ ಭವ್ಯ ದೇವಾಲಯ ನಿರ್ಮಾಣವಾಗಲಿದೆ ಎಂದು ಶಂಭುನಾಥ ಸ್ವಾಮೀಜಿ ತಿಳಿಸಿದರು.

ಆದಿ ಚುಂಚನಗಿರಿ ಮಠದ ನೇತೃತ್ವದಲ್ಲಿ ಟ್ರಸ್ಟ್ ರಚಿಸುವ ಮೂಲಕ ಸಮಾಜದ ದಾನಿಗಳ ಸಹಕಾರದಿಂದ 3 ಕೋಟಿಗೂ ಅಧಿಕ ವೆಚ್ಚದಲ್ಲಿ ಮಲ್ಲಿಕಾರ್ಜುನ ದೇವಾಲಯ, ಗರ್ಭಗುಡಿ, ಪ್ರಾಂಗಣ, ಪ್ರಾಕಾರ, ಕಲ್ಯಾಣಿ, ಹೊಳೆಯಿಂದ ದೇವಾಲಯ ದವರೆಗೆ 108 ಮೆಟ್ಟಿಲು, ಆವರಣ ಗೋಡೆ ಸೇರಿದಂತೆ ಇತರ ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗಿದೆ.

ಸೋಮವಾರಪೇಟೆ ಭಾಗದ ಹಲವಷ್ಟು ದೇವಾಲಯಗಳ ಪೈಕಿ ದುದ್ದುಗಲ್ಲು ಶ್ರೀ ಮಲ್ಲಿಕಾರ್ಜುನ ದೇವಾಲಯ ಈ ವ್ಯಾಪ್ತಿಯ ಪ್ರಧಾನ ದೇವಾಲಯವಾಗಿದ್ದು, ಹಲವಷ್ಟು ಅಷ್ಟಮಂಗಲ ಪ್ರಶ್ನೆಗಳಲ್ಲೂ ಇದು ಕಂಡುಬಂದಿದೆ. ಈ ಹಿನ್ನೆಲೆ ಆದಿಚುಂಚನಗಿರಿ ಮಠದ ಮೂಲಕ ದೇವಾಲಯವನ್ನು ಪುನರ್ ನಿರ್ಮಿಸಲು ಮುಂದಾಗಿದ್ದೇವೆ ಎಂದು ಟ್ರಸ್ಟ್ ಸದಸ್ಯರಾದ ಹೆಚ್.ಎಂ. ಬಸಪ್ಪ, ರಾಜುಪೊನ್ನಪ್ಪ, ಹೆಚ್.ವಿ. ಮಿಥುನ್ ಅವರುಗಳು ತಿಳಿಸಿದ್ದಾರೆ.

ಶಿಲಾನ್ಯಾಸ ಸಂದರ್ಭ ಕಬಳಿ ಮಠದ ಶ್ರೀ ಶಿವಪುತ್ರ ಸ್ವಾಮೀಜಿ, ಚುಂಚನಕಟ್ಟೆ ಮಠದ ಶಿವಾನಂದ ಸ್ವಾಮೀಜಿ ಹಾನಗಲ್ಲು ಗ್ರಾಮಾಧ್ಯಕ್ಷ ಜೋಯಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯ ಬಿ.ಜೆ. ದೀಪಕ್, ಪ್ರಮುಖರಾದ ಕೆ.ಎಂ. ಲೋಕೇಶ್, ಭರತ್‍ಕುಮಾರ್, ಸಂಜಯ್ ಜೀವಿಜಯ, ಹೆಚ್.ಆರ್. ಸುರೇಶ್, ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಎ.ಆರ್. ಮುತ್ತಣ್ಣ, ರಾಜ್ಯ ನಿರ್ದೇಶಕ ಶೇಖರ್, ಜಿ.ಪಂ. ಇ.ಇ. ಶ್ರೀಕಂಠಯ್ಯ, ಎಇಇ ವೀರೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.