ಮಂಗಳವಾರ ಕುರ್ಚಿ ಗ್ರಾಮದ ಬೆಳೆಗಾರ ಅಲ್ಲೇಟೀರ ವಿಜು ಮಾಚಯ್ಯ ಅವರು ತಮ್ಮ ಬೈಕ್‍ನಲ್ಲಿ ಶ್ರೀಮಂಗಲ ದಿಂದ ಕಾರ್ಮಿಕ ನೋರ್ವನನ್ನು ಕುರ್ಚಿ ಗ್ರಾಮದಲ್ಲಿರುವ

ತಮ್ಮ ತೋಟಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಪೂರ್ವಾಹ್ನ 7.30 ಗಂಟೆಗೆ ಶ್ರೀಮಂಗಲ-ಕುರ್ಚಿ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಪಕ್ಕದ ತೋಟದಿಂದ

ದಿಢೀರಾಗಿ ಕಾಡಾನೆ ಎದುರಾಗಿದ್ದು, ಬೈಕ್ ಸವಾರರನ್ನು ಕಂಡು ಅಟ್ಟಿಸಿ ಕೊಂಡು ಬಂದ ಸಂದರ್ಭ ಬೈಕ್ ಬಿಟ್ಟು ಹಿಂದಕ್ಕೆ ಓಡಿದ್ದಾರೆ. ಅಟ್ಟಿಸಿ ಕೊಂಡು ಬಂದ ಕಾಡಾನೆ ಬೈಕ್‍ನ ಮೇಲೆ ಎರಗಿದ್ದು, ಬೈಕ್‍ಗೆ ಹಾನಿ ಮಾಡಿದೆ. ಸವಾರರಿಗೆ ಯಾವುದೇ ಗಾಯವಾಗಿಲ್ಲ.

(ಮೊದಲ ಪುಟದಿಂದ) ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಶ್ರೀಮಂಗಲ ಆರ್.ಎಫ್.ಓ. ವೀರೇಂದ್ರ ಮರಿಬಸಣ್ಣವರ್, ಸಿಬ್ಬಂದಿಗಳು ತೆರಳಿ, ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಕೈಗೊಂಡಿದ್ದಾರೆ.

(ಮೊದಲ ಪುಟದಿಂದ) ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಶ್ರೀಮಂಗಲ ಆರ್.ಎಫ್.ಓ. ವೀರೇಂದ್ರ ಮರಿಬಸಣ್ಣವರ್, ಸಿಬ್ಬಂದಿಗಳು ತೆರಳಿ, ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಕೈಗೊಂಡಿದ್ದಾರೆ.