ಮಡಿಕೇರಿ, ನ. 10: ಕೊಡಗಿನ ಪ್ರಮುಖ ಸುಗ್ಗಿ ಹಬ್ಬವಾದ ‘ಪುತ್ತರಿ’ಯ ದಿನಾಂಕ ಹಾಗೂ ‘ಕಲಾಡ್ಚ ಹಬ್ಬ’ದ ದಿನಾಂಕವನ್ನು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ತಾ. 15 ರಂದು ಶಾಸ್ತ್ರೋಕ್ತವಾಗಿ ನಿಗದಿಗೊಳಿಸಲಾಗುವುದು.ಅದೇ ದಿನ ದೇವಾಲಯದ ನಿತ್ಯ ಪೂಜಾ ಕೈಂಕರ್ಯಗಳ ನಂತರ ಆದಿಸ್ಥಾನ ‘ಮಲ್ಮ’ ಬೆಟ್ಟಕ್ಕೆ ತೆರಳಿ ಅಲ್ಲಿ ಪ್ರಾಚೀನ ಸಂಪ್ರದಾಯದಂತೆ ತಕ್ಕಮುಖ್ಯಸ್ಥರಾದ ಪರದಂಡ ಕುಟುಂಬಸ್ಥರು, ನೆಲಜಿ, ಪೇರೂರು ಗ್ರಾಮದ ಭಕ್ತಾದಿಗಳು, ಮುಖ್ಯಸ್ಥರೊಡಗೂಡಿ ‘ದೇವ ಕಟ್ಟನ್ನು’ ಹಾಗೂ ಇದರ ಆಚರಣೆಯನ್ನು ಅದರ ‘ಮಹತ್ವ’ವನ್ನು ದೇವ ಸನ್ನಿಧಾನದಲ್ಲಿ ಮಾತಿನ ಮೂಲಕ ಹೇಳಿ ಹಬ್ಬದವರೆಗೆ ಆಚರಣೆಗೆ ತರಲಾಗುವುದು ಎಂದು ದೇವಾಲಯದ ತಕ್ಕಮುಖ್ಯಸ್ಥರಾದ ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ.