ಮಡಿಕೇರಿ, ನ. 9: ನೆರೆಯ ಕೇರಳ ರಾಜ್ಯದ ಶಬರಿಮಲೈನಲ್ಲಿ ಜರುಗುವ ಮಂಡಲ - ಮಕರಜ್ಯೋತಿ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದಿಂದ ಹಲವಾರು ಮಂದಿ ಯಾತ್ರಿಗಳು ತೆರಳುತ್ತಾರೆ. ಕೊಡಗು ಜಿಲ್ಲೆಯಿಂದಲೂ ಸಹಸ್ರಾರು ಮಂದಿ ಯಾತ್ರಿಗಳಾಗಿ ತೆರಳುತ್ತಾರೆ.ಕೋವಿಡ್ ಹಿನ್ನೆಲೆಯಲ್ಲಿ ಶಬರಿಮಲೈಗೆ ತೆರಳುವ ಭಕ್ತರು - ಯಾತ್ರಾರ್ಥಿಗಳಿಗಾಗಿ ಕೇರಳ ಸರಕಾರ ಕೆಲವೊಂದು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ರಾಜ್ಯ ಸರಕಾರಕ್ಕೂ ಕಳುಹಿಸಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತರು ಕೇರಳ ಸರಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ಸೂಚನೆ ನೀಡಿ ಸುತ್ತೋಲೆ ಹೊರಡಿಸಿದ್ದಾರೆ.ಕರ್ನಾಟಕ ರಾಜ್ಯದಿಂದ ಕೇರಳ ರಾಜ್ಯದ ಶ್ರೀಕ್ಷೇತ್ರ ಶಬರಿಮಲೈಗೆ ತೆರಳುವ ಭಕ್ತಾದಿಗಳು, ಯಾತ್ರಾರ್ಥಿಗಳು hಣಣಠಿs://sಚಿbಚಿಡಿimಚಿಟಚಿoಟಿಟiಟಿe.oಡಿg / ವೆಬ್‍ಸೈಟ್‍ನ ಪೋರ್ಟಲ್‍ನಲ್ಲಿ ಕಡ್ಡಾಯ ವಾಗಿ ನೋಂದಣಿ