ಮಡಿಕೇರಿ, ನ. 9: ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದ ಸರಕಾರವು ಟಿಪ್ಪು ಜಯಂತಿಯನ್ನು ತಾ. 10 ರಂದು (ಇಂದು) ಆಚರಣೆಗೆ ತಂದಿದ್ದು, ಕಳೆದ ವರ್ಷದಿಂದ ರಾಜ್ಯ ಸರಕಾರ ಈ ಆಚರಣೆ ರದ್ದುಗೊಳಿಸಿದೆ. ಆ ಹಿನ್ನೆಲೆಯಲ್ಲಿ ಇಂದು ಕೊಡಗು ಪೊಲೀಸ್ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು ಇರಿಸುವದರೊಂದಿಗೆ ಮುಂಜಾಗ್ರತಾ ಕ್ರಮಕೈಗೊಂಡಿದೆ.

ಇನ್ನು 2015ರಲ್ಲಿ ಈ ವೇಳೆ ಸಂಭವಿಸಿದ್ದ ಗಲಭೆಯಲ್ಲಿ ಸಾವಿಗೀಡಾಗಿರುವ ವಿ.ಹಿಂ.ಪ. ಪ್ರಮುಖ ದೇವಪಂಡ ಕುಟ್ಟಪ್ಪ ಅವರ ಆತ್ಮಕ್ಕೆ ಶಾಂತಿಕೋರಿ; ಮಾದಾಪುರ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಕುಟುಂಬದಿಂದ ಶಾಂತಿ ಪೂಜೆ ಕೈಗೊಳ್ಳುವದಾಗಿ ಮೃತರ ಪುತ್ರ ಡಿ.ಕೆ. ಡಾಲಿ ತಿಳಿಸಿದ್ದಾರೆ. ಅಲ್ಲದೆ ಮಡಿಕೇರಿ ಶ್ರೀ ಓಂಕಾರೇಶ್ವರ ಸನ್ನಿಧಿಯಲ್ಲಿ ಪ್ರತಿವರ್ಷದಂತೆ ಬೆಳಿಗ್ಗೆ 9 ಗಂಟೆಗೆ ಶಾಂತಿ ಪೂಜೆ ಕೈಗೊಳ್ಳಲಿರುವದಾಗಿ ಬಜರಂಗದಳ ಜಿಲ್ಲಾ ಸಂಚಾಲಕ ಕೆ.ಹೆಚ್. ಚೇತನ್ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸ್ ಇಲಾಖೆ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡಿರುವದಾಗಿ ಎಸ್‍ಪಿ. ಕ್ಷಮಾಮಿಶ್ರಾ ಮಾಹಿತಿ ನೀಡಿದ್ದಾರೆ.