ಕೂಡಿಗೆ, ನ. 9: ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ವತಿಯಿಂದ ಮಾರಾಟವಾದ ‘ಪ್ರಿಯಾ333’ ಬಿತ್ತನೆ ಬೀಜವನ್ನು ಹಾರಂಗಿ ಅಚ್ಚುಕಟ್ಟು ಪ್ರದೇಶದ ಸಹಕಾರ ಸಂಘಕ್ಕೆ ಒಳಪಡುವ 14. ಗ್ರಾಮಗಳಿಗೆ ಮಾರಾಟ ಮಾಡಲಾಗಿತ್ತು. ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು, ಮದಲಾಪುರ, ಕಣಿವೆ, ಸೀಗೆಹೊಸೂರು, ಮಾವಿನಹಳ್ಳ ವ್ಯಾಪ್ತಿಯ 44 ರೈತರು ಸಹಕಾರದಿಂದ ಬಿತ್ತನೆ ಬೀಜವನ್ನು ತೆಗೆದುಕೊಂಡು ಹೋಗಿ ಸಸಿ ಮಡಿಗಳನ್ನು ಮಾಡಿ ನಂತರ ನಾಟಿ ಮಾಡಿದ್ದರು. ಆದರೆ ನಾಟಿ ಮಾಡಿ ಮೂರು ತಿಂಗಳುಗಳು ಕಳೆದ ನಂತರ ಬೆಳೆಗಳಿಗೆ ರೋಗ ಕಾಣಿಸಿಕೊಂಡಿದೆ.
ಈ ವಿಷಯವಾಗಿ ಕಳೆದ ಒಂದು ತಿಂಗಳುಗಳಿಂದ ಈ ಭಾಗದ ರೈತರು ಸಹಕಾರ ಸಂಘದ ಅಧ್ಯಕ್ಷರಿಗೆ ದೂರು ನೀಡಿದರು ಮತ್ತು ಸಂಬಂಧಿಸಿದ ಸಂಸ್ಥೆಯವರಿಗೂ ವಿಷಯಗಳನ್ನು ತಿಳಿಸಿದ್ದರು. ಈ ಕುರಿತು ‘ಶಕ್ತಿ’ಯಲ್ಲಿ ತಾ. 9ರಂದು ವರದಿ ಕೂಡ ಪ್ರಕಟವಾಗಿತ್ತು.
ಇಂದು ರಾಜ್ಯ ಮಟ್ಟದ ಸಂಸ್ಥೆಯ ವಿಭಾಗೀಯ ಅಧಿಕಾರಿ ರಾಜಶೇಖರ ಮತ್ತು ಅವರ ತಂಡ ರೈತರ ಸಮ್ಮುಖದಲ್ಲಿ ಸಹಕಾರ ಸಭಾಂಗಣದಲ್ಲಿ ಸಮಸ್ಯೆಯ ಕುರಿತು ಸಭೆ ನಡೆಸಿದರು. ಈ ಸಂದರ್ಭ ಅನೇಕ ರೈತರು ತಮ್ಮ ಬೆಳೆ ಹಾಳಾದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಸಾಧÀಕ ಬಾಧÀಕಗಳ ಬಗ್ಗೆ ಚರ್ಚೆಗಳು ನಡೆದವು. ನಂತರ ಈ ವ್ಯಾಪ್ತಿಯ ರೈತರ ಜಮೀನಿಗೆ ಖುದ್ದಾಗಿ ಭೆÉೀಟಿ ನೀಡಿದ ಅಧಿಕಾರಿಗಳು ಮತ್ತು ಸಹಕಾರ ಸಂಘದ ಅಧ್ಯಕ್ಷರು ಪರಿಶೀಲನೆ ನಡೆಸಿದರು.
ಸಂಸ್ಥೆಯ ವಿಭಾಗೀಯ ವ್ಯವಸ್ಥಾಪಕರು ಪ್ರತಿಕ್ರಿಯಿಸಿ ಸಹಕಾರ ಸಂಘದ ವ್ಯಾಪ್ತಿಯ ಬೆಳೆ ಹಾಳಾಗಿದ್ದ ಪ್ರದೇಶಗಳನ್ನು ವೀಕ್ಷಣೆ ಮಾಡಲಾಗಿದೆ. ಬೆಳೆ ಹಾಳಾಗಿದ್ದು, ಇದರ ಮಾಹಿತಿಯನ್ನು ಸಂಸ್ಥೆಯ ಮುಖ್ಯ ವ್ಯವಸ್ಥಾಪಕರ ಗಮನಕ್ಕೆ ತಂದು ಪರಿಹಾರ ಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.
ಈ ಸಂದರ್ಭ ಸಹಕಾರ ಸಂಘದ ನಿರ್ದೇಶಕರುಗಳಾದ ಎಸ್.ಎನ್. ರಾಜಾರಾವ್, ಕೆ.ಟಿ. ಅರುಣ್ ಕುಮಾರ, ಕೆ.ಕೆ. ಭೋಗಪ್ಪ, ತಮ್ಮಣೆಗೌಡ, ಲಕ್ಷಣರಾಜ್ ಅರಸ್, ರಮೇಶ್ ಸೇರಿದಂತೆ ಮುಖ್ಯ ಕಾರ್ಯನಿವಾರ್ಹಣಾಧಿಕಾರಿ ಎಂ.ಪಿ. ಮೀನ ಹಾಗೂ ಈ ವ್ಯಾಪ್ತಿಯ ರೈತರು ಹಾಜರಿದ್ದರು.