ಮಡಿಕೇರಿ, ನ. 9: ಮೂರ್ನಾಡು ಬಳಿಯ ಬೇತ್ರಿಯಲ್ಲಿ ಬೆಳ್ಳಂಬೆಳಿಗ್ಗೆ ಕಸವನ್ನು ಎಸೆಯಲು ಬಂದ ಲಾರಿ ಚಾಲಕನಿಗೆ ಕಸ ಎಸೆಯದಂತೆ ತಿಳಿಹೇಳಿದ ಘಟನೆ ನಡೆದಿದೆ. ಬೇತ್ರಿ ಸೇತುವೆ ಸಮೀಪ ಬೆಳಿಗ್ಗೆ ‘ಕ್ಲೀನ್ ಕೂರ್ಗ್ ಇನಿಷಿಯೇಟಿವ್’ ಸದಸ್ಯರು ಸೈಕ್ಲಿಂಗ್ ಮಾಡುತ್ತಿದ್ದ ಸಂದರ್ಭ ಲಾರಿ ಚಾಲಕ ನೋರ್ವ ಸೇತುವೆಯಲ್ಲಿ ಲಾರಿ ನಿಲ್ಲಿಸಿ ಕಸದ ಚೀಲವನ್ನು ಕಾವೇರಿ ನದಿಗೆ ಎಸೆಯಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಕ್ಲೀನ್ ಕೂರ್ಗ್ ಇನಿಷಿಯೇಟಿವ್‍ನ ಬಡುವಂಡ ಅರುಣ್ ಅಪ್ಪಚ್ಚು ಹಾಗೂ ಇತರರು ಚಾಲಕನಿಗೆ ಕಸ ಎಸೆಯದಂತೆ ತಿಳಿಹೇಳಿ, ಕಸವನ್ನು ಸೂಕ್ತ ಜಾಗದಲ್ಲಿ ವಿಲೇವಾರಿ ಮಾಡುವಂತೆ ಹೇಳಿದರು.