ವೀರಾಜಪೇಟೆ ವರದಿ, ನ.8: ಕಳೆದ ಮೂರು ದಿನಗಳಿಂದ ಬಾಲೆಕಾರಡ ಬಳಗದಿಂದ ಅಮ್ಮತ್ತಿಯಲ್ಲಿ ನಡೆಯುತ್ತಿದ್ದ 24 ವಯೋಮಿತಿಯ ಕಾಲೇಜು ಯುವಕರ ‘5’ ಂ siಜe ಹಾಕಿ ಪಂದ್ಯಾಟದಲ್ಲಿ ಬೊಟ್ಟಿಯತ್ನಾಡ್ ಕುಂದ ತಂಡ ಎದುರಾಳಿ ಅತ್ತೂರು ಸ್ಟೋರ್ಟ್ ಕ್ಲಬ್ ತಂಡವನ್ನು 7-5 ಗೊಲುಗಳ ಅಂತರದಿಂದ ಮಣಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಕುಂದ ಪರವಾಗಿ ಮೇರಿಯಂಡ ಅಯ್ಯಣ್ಣ(4,19ನಿ.)ಪರದಂಡ ಪ್ರಜ್ವಲ್(8) ಪ್ರಜ್ವಲ್ .ಬಿ.ಆರ್(15,20,25) ಪರದಂಡ ಮೋಣಪ್ಪ (29ನಿ.) ಗೋಲು ದಾಖಲಿಸಿ ತಂಡದ ಗೆಲುವಿಗೆ ನೆರವಾದರು. ಹಾತೂರು ಕ್ಲಬ್ ತಂಡದ ಪರ ಬಿಪಿನ್ (3,10,23 ನಿ.) ಸಪನ್ (14) ಧನುಶ್ (16) ಗೋಲು ಬಾರಿಸಿದರು.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅತ್ತೂರು ಕ್ಲಬ್ ತಂಡ , ಏಂ12 ತಂಡದ ವಿರುದ್ಧ 4-2 ಗೋಲುಗಳಿಂದ ಹಾಗೂ ಮತ್ತೊಂದು ಪಂದ್ಯದಲ್ಲಿ ಶೂಟ್‍ಔಟ್‍ನಲ್ಲಿ ಕುಂದ 2-0 ಗೋಲಿನಿಂದ ಕಾಕೊಟುಪರಂಬು ತಂಡವನ್ನು ಸೋಲಿಸಿತು. ಮಧ್ಯಾಹ್ನ ನಡೆದ ಪ್ರದರ್ಶನ ಪಂದ್ಯದಲ್ಲಿ ಕೋಣನಕಟ್ಟೆ, ಅಮ್ಮತ್ತಿ ತಂಡದ ವಿರುದ್ಧ ಜಯಗಳಿಸಿತು. ಬಹುಮಾನ ವಿತರಣೆ ಮಾಡಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ ಮಾತನಾಡಿದರು. ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಇದ್ದರು.
ವೈಯಕ್ತಿಕ ಪ್ರಶಸ್ತಿ
ಬೆಸ್ಟ್ ಆಲ್‍ರೌಂಡರ್ ರಾಯ್ ಅಯ್ಯಣ್ಣ (ಕುಂದ) ಬೆಸ್ಟ್‍ಗೋಲು ಕೀಪರ್ ಚೆಂಗಪ್ಪ (ಹಾತೂರು ಕ್ಲಬ್, ಬೆಸ್ಟ್‍ಪ್ಲೇಯರ್ ಸಾವನ್ (ಏ.ಂ.12) ಫೈಯರ್ ಪ್ಲೇ ಏ.ಂ.12 ತಂಡ
- ಪ್ರವೀಣ್ ಅಮ್ಮುಣಿಚಂಡ