ಸುಂಟಿಕೊಪ್ಪ,ನ.8: ಸುಂಟಿಕೊಪ್ಪ ಕಂದಾಯ ಇಲಾಖೆ ವತಿಯಿಂದ ಕೊಡಗರಹಳ್ಳಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತಾ. 9 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ಕೊಡಗರಹಳ್ಳಿ ವೃತ್ತ ಗ್ರಾಮಗಳ ರೈತರ ಪೌತಿ ಖಾತೆ ಆಂದೋಲನ ಆಯೋಜಿಸಲಾಗಿದೆ.

ಜಮೀನು ಹೊಂದಿರುವ ರೈತಾಪಿ ವರ್ಗದವರು, ಸಾರ್ವಜನಿಕರು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಖಾತೆದಾರರು ಮೃತರಾಗಿದ್ದಲ್ಲಿ ಪಹಣಿ, ಮರಣದೃಢೀಕರಣ ಪತ್ರ, ವಂಶಾವಳಿ, ಪಡಿತರ ಚೀಟಿ, ಆಧಾರ್‍ಕಾರ್ಡ್ ನೊಂದಿಗೆ ಸಲ್ಲಿಸಬಹುದೆಂದು ಇಲಾಖೆ ಪ್ರಕಟಣೆ ತಿಳಿಸಿದೆ.