ಕೂಡಿಗೆ, ನ. 8: ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ಈ ಬಾರಿ ಹೈಬ್ರೀಡ್ ತಳಿಗಳೆಂದು ಸಹಕಾರ ಸಂಘದಿಂದ ಖರೀದಿಸಿ ತಮ್ಮ ನೀರಾವರಿ ಜಮೀನಿನಲ್ಲಿ ಭತ್ತದ ನಾಟಿ ಮಾಡಿದ್ದರು. ಆದರೆ ಈ ಬಿತ್ತನೆ ಬೀಜದ ಬೆಳೆಯು ಶೇಕಡ 90 ರಷ್ಟು ಬೆಂಕಿ ರೋಗಕ್ಕೆ ತುತ್ತಾಗಿದೆ.

ಈ ಭಾಗದ ರೈತರು ಹೈಬ್ರೀಡ್ ತಳಿಯ ಭತ್ತದದಿಂದ ಬಹು ಉಪಯುಕ್ತವಾಗಿರುತ್ತದೆ ಎಂದು ಈ ಬಾರಿ ಹೊಸ ತಳಿಯನ್ನು ನಾಟಿಮಾಡಿದರು.

ಆದರೆ ಹಾರಂಗಿ ಅಚ್ಚುಕಟ್ಟು ಪ್ರದೇಶಗಳಾದ ಹುದುಗೂರು ಮದಲಾಪುರ ಕಣಿವೆ ಮಲ್ಲೇನಹಳ್ಳಿ ಮಾವಿನಹಳ್ಳ ಭಾಗಗಳಲ್ಲಿ ಈ ರೋಗ ಅತಿ ಹೆಚ್ಚಾಗಿ ಕಾಣಿಸಿಕೊಂಡು ಈ ಭಾಗದ ರೈತರು ಪರದಾಡು ವಂತಾಗಿದೆ.

ಹಾರಂಗಿ ಅಚ್ಚುಕಟ್ಟು ಪ್ರದೇಶದ ಮಲ್ಲೇನಹಳ್ಳಿ ರೈತರುಗಳಾದ ಮಂಜುನಾಥ ಲೋಕೇಶ್ ಗಿರೀಶ್ ಮದಲಾಪುರ ಕುಮಾರ ಕೃಷ್ಣ ಕಣಿವೆಯ ಕೆ.ಆರ್. ರಂಗಸ್ವಾಮಿ ಕೂಡಿಗೆಯ ಕೆ.ಎನ್. ಮಂಜುನಾಥ ಸೇರಿದಂತೆ ಅನೇಕ ರೈತರು ಬೆಳೆ ಹಾಳಾಗಿರುವ ಹಿನ್ನೆಲೆಯಲ್ಲಿ ಪರಿಹಾರವನ್ನು ಒದಗಿಸುವಂತೆ ಅಗ್ರಹಿಸಿದ್ದಾರೆ.