ಸಿದ್ದಾಪುರ, ನ. 8: ಇಂಡಿಯನ್ ಸೋಶಿಯಲ್ ಫೆÇೀರಮ್ ಅಲ್-ಹಸ್ಸಾ ವಲಯದ ವತಿಯಿಂದ 65ನೇ ರಾಜ್ಯೋತ್ಸವ ಆಚರಿಸಲಾಯಿತು. ಅಲ್ ಹಸ್ಸಾ ವಲಯ ಅಧ್ಯಕ್ಷ ಬಶೀರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕರ್ನಾಟಕ ರಾಜ್ಯೋತ್ಸವದ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಕೋವಿಡ್ 19 ಲಾಕ್ ಡೌನ್ ಸಮಯದಲ್ಲಿ ಅನಿವಾಸಿ ಭಾರತೀಯರ ಕಷ್ಟಕ್ಕೆ ಸ್ಪಂದಿಸಿ ಅಗತ್ಯ ಸೇವೆಗೈದ ಇಂಡಿಯನ್ ಸೋಶಿಯಲ್ ಫೆÇೀರಮ್ ಸದಸ್ಯ ಬಾತಿಷ್ ಗುರುವಾಯನಕೆರೆ ಇವರನ್ನು ಸನ್ಮಾನಿಸಲಾಯಿತು. ಹಬೀಬ್ ಕಾಟಿಪಳ್ಳ ಇವರ ಹಾಡುಗಾರಿಕೆ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

ಕಾರ್ಯಕ್ರಮದಲ್ಲಿ ಇಂಡಿಯನ್ ಸೋಶಿಯಲ್ ಫೆÇೀರಮ್ ಅಲ್-ಹಸ್ಸಾ ವಲಯದ ಉಪಾಧ್ಯಕ್ಷ ಶೌಕಾತ್ ಮನಾಲ್, ಪ್ರಧಾನ ಕಾರ್ಯದರ್ಶಿ ಹುಸೈನ್ ಜೋಕಟ್ಟೆ ಹಾಗೂ ವಲಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕಾರ್ಯದರ್ಶಿ ನಾಝಿಮ್ ಶೇಕ್ ಸ್ವಾಗತಿಸಿ, ಉಪಾಧ್ಯಕ್ಷ ಮುಖ್ತರ್ ಎಮ್. ಜಿ. ವಂದಿಸಿದರು.