ವೀರಾಜಪೇಟೆ ವರದಿ, ನ.7: ಬಾಲೆಕಾರಡ ಬಳಗದಿಂದ ಅಮ್ಮತ್ತಿಯಲ್ಲಿ ನಡೆಯುತ್ತಿರುವ 24 ವಯೋಮಿತಿಯ ಕಾಲೇಜು ಯುವಕರ ‘5’ ಂ siಜe ಹಾಕಿ ಪಂದ್ಯಾಟದಲ್ಲಿ ಏಂ12, ಹಾತೂರು ಕ್ಲಬ್, ಬೊಟ್ಟಿಯತ್ ನಾಡ್ ಕುಂದ ಹಾಗೂ ಕಾಕೋಟುಪರಂಬು ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ತಾ. 8ರಂದು (ಇಂದು) ಬೆಳಿಗ್ಗೆ 9.30ಕ್ಕೆ ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಏಂ12 ಹಾಗೂ ಹಾತೂರು ಕ್ಲಬ್ ಮತ್ತು ಇನ್ನೊಂದು ಪಂದ್ಯದಲ್ಲಿ ಬೊಟ್ಟಿಯತ್ ನಾಡ್ ಕುಂದ ಹಾಗೂ ಕಾಕೋಟುಪರಂಬು ತಂಡಗಳು ಸೆಣಸಲಿವೆ. ಅಂತಿಮ ಪಂದ್ಯ ಮಧ್ಯಾಹ್ನ 2.30ಕ್ಕೆÉ ನಡೆಯಲಿದೆ.

ಸೆಮಿ ಹಾಗೂ ಫೈನಲ್ ಪಂದ್ಯಗಳ ನಡುವೆ ಅಮ್ಮತ್ತಿ ಹಾಗೂ ಕೋಣನಕಟ್ಟೆ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ.

ಇಂದು ಶಿವಾಜಿ ತಂಡದ ಮುಕ್ಕಾಟಿರ ನಾಣಯ್ಯ ಮತ್ತು ಪರದಂಡ ಮೊಣ್ಣಪ್ಪ ಹ್ಯಾಟ್ರಿಕ್ ಗೋಲು ಬಾರಿಸಿದರು.

ತೀರ್ಪುಗಾರರಾಗಿ ಅಪಚಟ್ಟೋಳಂಡ ಅಯ್ಯಪ್ಪ, ಚೊಟ್ಟೆರ ಉತ್ತಪ್ಪ ಮತ್ತು ಕಾಕೋಟು ಪರಂಬುವಿನ ಶಿವನ್ ಕಾರ್ಯನಿರ್ವ ಹಿಸಿದರು. ವೀಕ್ಷಕ ವಿವರಣೆಯನ್ನು ನೆರ್ಪಂಡ ಹರ್ಷ ಮಂದಣ್ಣ ನೀಡಿದರು. ವಿನ್ನರ್ ಟ್ರೋಫಿಯನ್ನು ಕುಂಡ್ಯೋಳಂಡ ದಿ. ಪೂವಣ್ಣ ಹೆಸರಿನಲ್ಲಿ ಅವರ ಪತ್ನಿ ಹೇಮಾ ಪೂವಣ್ಣ, ರನ್ನರ್ಸ್ ಟ್ರೋಫಿಯನ್ನು ಮಲಚೀರ ಅನೀಶ್, ಫೈಯರ್ ಪ್ಲೇ ಟ್ರೋಫಿಯನ್ನು ಮಂಡೇಡ ಗಿರಿ ನೀಡಿದ್ದಾರೆ.