ಸಿದ್ದಾಪುರ, ನ. 8: ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆ ಪಿ.ಟಿ. ಶ್ರೀನಿವಾಸ್ ಸಹಾಯಕ ಠಾಣಾಧಿಕಾರಿಯಾಗಿ ಮುಂಬಡ್ತಿ ಪಡೆದಿದ್ದು, ಚೆಟ್ಟಳ್ಳಿ ಉಪ ಠಾಣೆಗೆ ವರ್ಗಾವಣೆಗೊಂಡಿದ್ದಾರೆ ಹಾಗೂ ಇನ್ನೋರ್ವ ಮುಖ್ಯ ಪೇದೆ ಎ.ಜಿ. ಲೋಕೇಶ್ ಅರಣ್ಯ ಸೆಲ್ಗೆ ಹಾಗೂ ಹೆಚ್.ಎಸ್ ಪೃಥ್ವಿಶ್ ಮಡಿಕೇರಿ ಲೋಕಾಯುಕ್ತ ವಿಭಾಗಕ್ಕೆ ವರ್ಗಾವಣೆಯಾಗಿದ್ದು, ಈ ಮೂವರಿಗೆ ಸಿದ್ದಾಪುರ ಠಾಣಾಧಿಕಾರಿ ಮೋಹನ್ರಾಜ್ ನೇತೃತ್ವದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಸಂದರ್ಭ ಸಹಾಯಕ ಠಾಣಾಧಿಕಾರಿಗಳಾದ ತಮ್ಮಯ್ಯ, ಗಣಪತಿ, ಮೋಹನ್ ಹಾಗೂ ಸಿಬ್ಬಂದಿ ಹಾಜರಿದ್ದರು.