ಮಡಿಕೇರಿ, ನ. 8: ಬಿ. ಶೆಟ್ಟಿಗೇರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಿಂದ ಅನುದಾನಿತ ಕೆ.ಬಿ. ಪ್ರೌಢಶಾಲೆಯ ಆಟದ ಮೈದಾನವು ಹುಲ್ಲು, ಗಿಡಗಂಟಿಗಳಿಂದ ತುಂಬಿದ್ದು, ಇದನ್ನು ಮನಗಂಡ ಬಿ. ಶೆಟ್ಟಿಗೇರಿ ಸಂಘದ ಹಿರಿಯ ವಿದ್ಯಾರ್ಥಿಗಳು ಕಳೆ ನಾಶಕವನ್ನು ಸಿಂಪಡಿಸಿ ಮೈದಾನವನ್ನು ಸ್ವಚ್ಛಗೊಳಿಸಿದ್ದಾರೆ.

ಶಾಲಾ ಮೈದಾನವನ್ನು ಸ್ವಚ್ಛಗೊಳಿಸಲು ಬೇಕಾದ 5 ಲೀಟರ್ ರೌಂಡ್‍ಅಪ್ ಔಷಧಿಯನ್ನು ಜಯಭಾರತ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ನೀಡಿದ್ದು, ಇದಕ್ಕೆ ಶಾಲಾ ಆಡಳಿತ ಮಂಡಳಿ ಶ್ಲಾಘಿಸಿದೆ.