ಸುಂಟಿಕೊಪ್ಪ, ನ. 8: ಸುಂಟಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಬೂತ್ ಸಭೆ ತಾ. 3 ರಂದು ಸಂಜೆ ತಾಲೂಕು ಪಂಚಾಯಿತಿ ಸದಸ್ಯೆ ವಿಮಲಾವತಿ ಅವರ ನಿವಾಸದಲ್ಲಿ ಆಯೋಜಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಶಕ್ತಿ ಕೇಂದ್ರದ ಪ್ರಮುಖ ಬಿ.ಕೆ. ಪ್ರಶಾಂತ್ ಮತ್ತು ಸಹ ಪ್ರಮುಖ್ ರಂಜಿತ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಪಕ್ಷದ ನಿಕಟಪೂರ್ವ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಮಾತನಾಡಿ, ಮುಂದಿನ ದಿನಗಳು ಈ ಭಾಗಕ್ಕೆ ಮಹತ್ವದ ದಿನಗಳಾಗಿದ್ದು, ಕಾರ್ಯಕರ್ತರೆಲ್ಲರೂ ಒಗ್ಗಟ್ಟಿನಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ಸಭೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ, ಪಟ್ಟೆಮನೆ ಉದಯಕುಮಾರ್, ಮಾಜಿ ಸದಸ್ಯರಾದ ಬಿ.ಎಂ. ಸುರೇಶ್, ಸಿ. ಚಂದ್ರ, ಧನು ಕಾವೇರಪ್ಪ, ಯುವ ಮೋರ್ಚಾ ಅಧ್ಯಕ್ಷ ಎಸ್. ವಿಘ್ನೇಶ್, ಹಿಂದುಳಿದ ವರ್ಗದ ಅಧ್ಯಕ್ಷ ಸಿ.ಸಿ. ಸುನಿಲ್, ಪುನೀತ್‍ಕುಮಾರ್ ಹಾಗೂ ಶ್ರೀರಾಮ ರೈ, ಕಾರ್ಯಕರ್ತರು ಸಭೆಯಲ್ಲಿ ಹಾಜರಿದ್ದರು.