ಕೂಡಿಗೆ, ನ. 8: ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕೂಡಿಗೆ ಶಾಲಾ ವಿದ್ಯಾರ್ಥಿಗೆ ಶಾಲಾ ಶಿಕ್ಷಕರ ವೃಂದ ರೂ. 15 ಸಾವಿರ ಸಹಾಯ ಧನ ನೀಡಿ ಸಹಕರಿಸಿದ್ದಾರೆ.

ಕೂಡಿಗೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ ಎಂಬ ವಿದ್ಯಾರ್ಥಿಗೆ ಆಸ್ಪತ್ರೆ ವೆಚ್ಚಕ್ಕೆ ಧನಸಹಾಯ ನೀಡಿದ್ದಾರೆ. ರಾಜ್ಯ ಮಟ್ಟದ ವಿದ್ಯಾರ್ಥಿ ಮತ್ತು ಶಿಕ್ಷಕರ ಕಲ್ಯಾಣ ನಿಧಿಯ ಸಂಸ್ಥೆಗೆ ಶಾಲಾ ಶಿಕ್ಷಕರ ವತಿಯಿಂದ ಪತ್ರ ವ್ಯವಹಾರ ನಡೆದಿದ್ದು ಈಗಾಗಲೇ 96 ಸಾವಿರ ವೆಚ್ಚದ ದಾಖಲೆಯನ್ನು ಕಳುಹಿಸಲಾಗಿದೆ; ಸಹಕಾರ ನೀಡುವ ಭರವಸೆ ಲಭಿಸಿದೆ.

ಶಾಲಾ ಮುಖ್ಯ ಶಿಕ್ಷಕ ಬಿ.ಸಿ. ರಾಜು, ಸಹ ಶಿಕ್ಷಕರುಗಳಾದ ಟಿ.ಕೆ. ವನಜಾಕ್ಷಿ, ಹೆಚ್.ಎಸ್. ಶೈಲಜ, ಎಲ್.ಡಿ. ಸೋಮಶೇಖರ್, ಹೆಚ್.ಟಿ. ನಾಗರಾಜ್ ಹಾಜರಿದ್ದರು.