ಕುಶಾಲನಗರ, ನ. 6: ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಿ. ಜಯವರ್ಧನ್, ಉಪಾಧ್ಯಕ್ಷರಾಗಿ ಸುರಯ್ಯಭಾನು ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದರು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದ ಬಳಿಕ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಧಿಕಾರ ವಹಿಸಿಕೊಂಡರು.
ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ಜಯವರ್ಧನ್, ಪಟ್ಟಣ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಬಹುತೇಕ ಬಡಾವಣೆಗಳ ಸಮಸ್ಯೆಗಳ ಬಗ್ಗೆ ಅರಿವಿದ್ದು ಪಂಚಾಯಿತಿ ಅಧಿಕಾರಿಗಳು, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಗಳ ನಿವಾರಣೆ, ಅಪೂರ್ಣಗೊಂಡಿರುವ ಪ್ರಮುಖ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕಾಳಜಿ ವಹಿಸುತ್ತೇನೆ. ಪಟ್ಟಣಕ್ಕೆ ಹಾಗೂ ಪಂಚಾಯ್ತಿಗೆ ಯಾವುದೇ ರೀತಿಯಲ್ಲಿ ಕಳಂಕ ಬಾರದಂತೆ ಆಡಳಿತ ನೂತನ ಅಧ್ಯಕ್ಷ ಜಯವರ್ಧನ್, ಪಟ್ಟಣ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಬಹುತೇಕ ಬಡಾವಣೆಗಳ ಸಮಸ್ಯೆಗಳ ಬಗ್ಗೆ ಅರಿವಿದ್ದು ಪಂಚಾಯಿತಿ ಅಧಿಕಾರಿಗಳು, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಗಳ ನಿವಾರಣೆ, ಅಪೂರ್ಣಗೊಂಡಿರುವ ಪ್ರಮುಖ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕಾಳಜಿ ವಹಿಸುತ್ತೇನೆ. ಪಟ್ಟಣಕ್ಕೆ ಹಾಗೂ ಪಂಚಾಯ್ತಿಗೆ ಯಾವುದೇ ರೀತಿಯಲ್ಲಿ ಕಳಂಕ ಬಾರದಂತೆ ಆಡಳಿತ ಮಾತನಾಡಿ, ಜೆಡಿಎಸ್‍ನ ಪ್ರಜ್ವಲ್ ರೇವಣ್ಣ ಅವರ ಮಾರ್ಗದರ್ಶನದಂತೆ ಜೆಡಿಎಸ್‍ಗೆ ಉಪಾಧ್ಯಕ್ಷ ಸ್ಥಾನ ಲಭಿಸಿದೆ. ಪಟ್ಟಣದ ಅಭಿವೃದ್ಧಿಗೆ ಎಲ್ಲಾ ರೀತಿಯಲ್ಲಿ ಶ್ರಮಿಸಲಾಗುವುದು ಎಂದರು.
ಪಕ್ಷದ ಮುಖಂಡರು, ಸಂಘಟನೆ, ಸಂಘ-ಸಂಸ್ಥೆಗಳ ಪ್ರಮುಖರು, ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.
ಪಪಂ ಮುಖ್ಯಾಧಿಕಾರಿ ಸುಜಯ್‍ಕುಮಾರ್, ಕುಡಾ ಅಧ್ಯಕ್ಷ ಎಂಎಂ. ಚರಣ್, ಬಿಜೆಪಿ ನಗರಾಧ್ಯಕ್ಷ ಉಮಾಶಂಕರ್, ಕುಡಾ ಸದಸ್ಯರಾದ ವೈಶಾಖ್, ವಿ.ಡಿ. ಪುಂಡರೀಕಾಕ್ಷ, ಮಧುಸೂದನ್, ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ವಕ್ತಾರ ಕೆ.ಜಿ. ಮನು, ಜೆಡಿಎಸ್ ಪ್ರಮುಖರಾದ ಶಬ್ಬೀರ್, ಬಿಜೆಪಿ ಹಿರಿಯರಾದ ಜಿ.ಎಲ್. ನಾಗರಾಜ್, ಪಂಚಾಯಿತಿ ಸದಸ್ಯರುಗಳು, ಪಕ್ಷದ ಕಾರ್ಯಕರ್ತರು ಇದ್ದರು.