ವೀರಾಜಪೇಟೆ, ನ. 6: ಹರಿಯಾಣದ ಫರಿದಾಬಾದ್‍ನಲ್ಲಿ ಮುಸ್ಲಿಂ ಯುವಕನ ಪ್ರೀತಿಯನ್ನು ನಿರಾಕರಿಸಿದ ಹಿಂದೂ ಯುವತಿ ನಿಖಿತ ಥೋಮರ್ ಎಂಬವರನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆಗೈದ ತೌಫಿಕ್‍ಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಇಂದು ಹಿಂದೂ ಜಾಗರಣಾ ವೇದಿಕೆ ಪ್ರಮುಖರು ಇಲ್ಲಿನ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಶಿರಸ್ತೆದಾರ್ ಸಂಜಿವ್ ಕುಮಾರ್‍ಗೆ ಮನವಿ ಸಲ್ಲಿಸಿದರು.
ಆರ್.ಎಸ್.ಎಸ್.ನ ಜಿಲ್ಲಾ ಸಂಪರ್ಕ ಪ್ರಮುಖ್ ಕುಟ್ಟಂಡ ಪ್ರಿನ್ಸ್ ಗಣಪತಿ ಮಾತನಾಡಿ ದೇಶದಲ್ಲಿ ಮತಾಂಧರ ಅಟ್ಟಹಾಸ ಹೆಚ್ಚಾಗುತ್ತಿದ್ದು ದೇಶ ವಿರೋಧಿ ಹಾಗೂ ಹಿಂದೂ ವಿರೋಧಿ ನೀತಿಯೊಂದಿಗೆ ಸಮಾಜಘಾತುಕ ಕೃತ್ಯದಲ್ಲಿ ತೊಡಗಿದ್ದಾರೆ. ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿಸುವ ನಾಟಕವಾಡಿ ಲವ್ ಜಿಹಾದ್ ಮೂಲಕ ಭಯೋತ್ಪಾದಕ ಕೃತ್ಯದಲ್ಲಿ ಬಳಕೆ ಮಾಡುತ್ತಿರುವುದು ಕೇರಳ ರಾಜ್ಯದಲ್ಲಿಯೇ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಲವ್ ಜಿಹಾದ್‍ಗೆ ಕಠಿಣ ಕಾನೂನನ್ನು ತರಬೇಕು. ಕೆಲವು ವಿಚಾರಗಳಲ್ಲಿ ಕಾನೂನು ದುರ್ಬಲವಾಗಿದ್ದು, ಮತಾಂತರ ನಿಷೇಧ ಕಾಯಿದೆ ಪರಿಣಾಮಕಾರಿ ಯಾಗಿ ತರಬೇಕು. ಕಾನೂನಿಗೆ ಸಂವಿಧಾನಾತ್ಮಕ ಶಕ್ತಿ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾಧ್ಯಕ್ಷ ಮೇವಡ ಅಯ್ಯಣ್ಣ, ತಾಲೂಕು ಅಧ್ಯಕ್ಷ ಯೋಗೇಶ್, ಆರ್‍ಎಸ್‍ಎಸ್‍ನ ತಾಲೂಕು ಉದ್ಯೋಗ್ ಕಾರ್ಯ ಪ್ರಮುಖ್ ಹೇಮಂತ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ, ಉಪಾಧ್ಯಕ್ಷ ಹರ್ಷವರ್ಧನ್ ಮತ್ತಿತರರು ಪಾಲ್ಗೊಂಡಿದರು.
ಮನವಿ ಸ್ವೀಕರಿಸಿದ ಶಿgಸ್ತೆದಾರರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲ ರಿಗೆ ಕಳುಹಿಸಿ ಕೊಡಲಾಗುವುದು ಎಂದು ಹೇಳಿದರು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೂ ಪ್ರತಿಭಟನೆ ನಡೆಯಿತು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಹಿಂದೂ ಜಾಗರಣ ವೇದಿಕೆಯ ತಾಲೂಕು ಅಧ್ಯಕ್ಷ ಪೆÇನ್ನಪ್ಪ, ಹಿಂಜಾವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಕುಕ್ಕೇರ, ತಾಲೂಕು ಮಾತೃಸುರಕ್ಷಾ ಸಂಯೋಜಕ್ ಅರುಣ್ ಕಡಗದಾಳು, ಹಿಂಜಾವೇ ತಾಲೂಕು ನಿಧಿ ಪ್ರಮುಖ್ ವಿಜು ಹರೀಶ್ ಮೇಕೇರಿ, ಹಿಂಜಾವೇ ವಲಯ ಪ್ರಮುಖರುಗಳು , ಭಜರಂಗದಳದ ಜಿಲ್ಲಾ ಸಂಯೋಜಕ್ ಚೇತನ್, ವಿದ್ಯಾರ್ಥಿ ಪ್ರಮುಖ್ ವಿನಯ್, ಭಾಜಪ ನಗರ ಅಧ್ಯಕ್ಷ ಮನು ಮಂಜುನಾಥ್, ನಗರ ಖಜಾಂಚಿ ಮುರುಗನ್, ಪ್ರಮುಖ್ ಬಿ.ಕೆ. ಜಗದೀಶ್ ಹಾಗೂ ತಾಲೂಕಿನ ವಿವಿಧ ಹಿಂಜಾವೇ ಘಟಕಗಳಿಂದ ಕಾರ್ಯಕರ್ತರು ಭಾಗವಹಿಸಿದ್ದರು.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಶ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.