ಮಡಿಕೇರಿ, ನ. 6: ಗೋಣಿಕೊಪ್ಪ ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಕೆ.ಆರ್. ಜಯಶಂಕರ್ ನೇಮಕಗೊಂಡಿದ್ದಾರೆ. ನಗರದ ಆರ್.ಎಂ.ಸಿ. ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯ್ಕೆ ನಡೆಯಿತು.

ಉಪಾಧ್ಯಕ್ಷರಾಗಿ ರಿಶ್ವಿನ್, ಭರತ್, ಪ್ರಧಾನ ಕಾರ್ಯದರ್ಶಿಯಾಗಿ ವಿವೇಕ್ ರಾಯ್ಕರ್, ಕಾರ್ಯದರ್ಶಿಯಾಗಿ ಬಿ.ಪಿ. ಬೋಪಣ್ಣ ನೇಮಕಗೊಂಡಿದ್ದಾರೆ.

ಈ ಸಂದರ್ಭ ಮಹಾಶಕ್ತಿ ಕೇಂದ್ರದ ಪ್ರಮುಖ ಕುಲ್ಲಚಂಡ ಚಿಣ್ಣಪ್ಪ, ಶಕ್ತಿ ಕೇಂದ್ರ ಪ್ರಮುಖ ನೂರೇರ ರಂಜಿ, ವೀರಾಜಪೇಟೆ ತಾಲೂಕು ಉಪಾಧ್ಯಕ್ಷ ಕುಪ್ಪಂಡ ಗಿರೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ, ವೀರಾಜಪೇಟೆ ತಾಲೂಕು ಒಬಿಸಿ ಅಧ್ಯಕ್ಷ ಕೆ. ರಾಜೇಶ್ ಹಾಗೂ ಇತರರು ಇದ್ದರು.